September 21, 2021

Newsnap Kannada

The World at your finger tips!

ಮೈಸೂರು ವಿವಿ 101 ಘಟಿಕೋತ್ಸವಕ್ಕೆ ರಾಜ್ಯಪಾಲ ಗೆಹ್ಲೋಟ್ ರಿಂದ ಚಾಲನೆ

Spread the love

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಿದರು.

ನಂತರ ಕೋವಿಡ್ ನಿಯಮಾವಳಿಯಂತೆ ನಡೆದ ಕಾರ್ಯಕ್ರಮದಲ್ಲಿ 244 ಪಿಎಚ್​​ಡಿ, 387 ಚಿನ್ನದ ಪದಕ ಪಡೆದವರಿಗೆ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ವಿವಿಯ ಸಮಕುಲಾಧಿಪತಿ ಸಿಎನ್ ಅಶ್ವತ್ಥ್ ನಾರಾಯಣ ಹಾಗೂ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಪದವಿ ಪ್ರದಾನ ಮಾಡಿದರು.

ಪದ್ಮಭೂಷಣ ಡಾ.ಗೋಂವಿದರಾಜನ್ ಪದ್ಮನಾಭನ್ ಮತ್ತು ವಿಷನ್ ಗ್ರೂಪ್ ಆನ್ ಸ್ಟಾರ್ಟ್ ಅಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಿಎಸ್ ಐಆರ್ ಮಹಾ ನಿರ್ದೇಶಕ ಹಾಗೂ ಡಿಎಸ್ ಐಆರ್ ಕಾರ್ಯದರ್ಶಿ ಡಾ.ಶೇಕರ್ ಸಿ ಮಂಡೆ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.

error: Content is protected !!