ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ – 20 ನಿಮಿಷದಲ್ಲಿ ಅಂತ್ಯ

Team Newsnap
1 Min Read

ನಾಡಿನ ಮನೆ ಮನಗಳಲ್ಲಿ ನಾಡಹಬ್ಬ ದಸರಾ ಸಂಭ್ರಮ ಕಳೆಗಟ್ಟಿದೆ. ಎಲ್ಲೆಡೆ ಸಂಭ್ರಮ ಸಡಗರ ಮನೆ ಮಾಡಿದೆ. ದಸರಾ ಪ್ರಮುಖ ಆಕರ್ಷಣೆಯಾದ ಮೈಸೂರಿನ ಐತಿಹಾಸಿಕ ಜಂಬೂ ಸವಾರಿ ಆರಂಭಕ್ಕೆ ಚಾಮುಂಡೇಶ್ವರಿ ಮಾತೆಗೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಲಾಯತು. ಕೇವಲ 20 ನಿಮಿಷದಲ್ಲಿ ಜಂಬೂ ಸವಾರಿಯೂ ಕೂಡ ಅಂತ್ಯ ಕಂಡಿತು.

jambu

ಅದಕ್ಕೂ ಮುನ್ನ ಅರಮನೆ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೋಡಿ ನಂದಿ ಧ್ವಜಕ್ಕೆ ಮೀನ ಲಗ್ನದಲ್ಲಿ ಪೂಜೆ ಸಲ್ಲಿಸಿದರು.

ಈ ಬಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ ಎರಡನೇ ಬಾರಿ ಚಿನ್ನದ ಅಂಬಾರಿಯನ್ನು ಹೊರುವ ಅಭಿಮನ್ಯು ಆನೆಗೆ ಶೃಂಗಾರ ಮಾಡಲಾಗಿದೆ. ನಮ್ದಾ , ಗಾದಿ, ಚಾಪು, ಆಭರಣಗಳನ್ನು ಧರಿಸಿ ಕ್ಯಾಪ್ಟನ್ ಅಭಿಮನ್ಯು ಗಾಂಭೀರ್ಯದಿಂದ ರೆಡಿಯಾಗಿದ್ದಾನೆ.

ಕೋಡಿ ಸೋಮೆಶ್ವರನಿಗೆ ಸಮಸ್ಕರಿಸಿ ಮುನ್ನಡೆದ ಅಭಿಮನ್ಯು ರಾಜ ಗಾಂಭೀರ್ಯದಲ್ಲಿ ಅರಮನೆಯತ್ತ ಹೆಜ್ಜೆ ಹಾಕಿದ್ದಾನೆ.

ಜಗದ್ವಿಖ್ಯಾತ ಜಂಬೂ ಸವಾರಿಯಲ್ಲಿ ಅಭಿಮನ್ಯುವಿಗೆ ಆನೆಗಳಾದ ಕಾವೇರಿ ಮತ್ತು ಚೈತ್ರ ಸಾಥ್ ನೀಡಿವೆ

ಇನ್ನು ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಾಲಸ್ವಾಮಿ, ಸಾಲು ಆನೆಯಾಗಿ ಅಶ್ವತ್ಥಾಮ ಭಾಗಿಯಾಗಿದ್ದಾವೆ.

ಇನ್ನು ಈ ಬಾರಿ ಕೇವಲ 6 ಆನೆಗಳು ಮಾತ್ರ ಮೆರವಣಿಗೆಯಲ್ಲಿ ಭಾಗಿಯಾಗಿವೆ. ಈ ಸಲದ ದಸರಾಗೆ ವಿಕ್ರಮ ಆನೆಗೆ ಮೆರವಣಿಗೆಯಿಂದ ಕೊಕ್ ನೀಡಲಾಗಿದೆ. ಮದ ಇರುವ ಹಿನ್ನೆಲೆ ವಿಕ್ರಮ ಮೆರವಣಿಗೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಜೊತೆಗೆ ಲಕ್ಷ್ಮೀ ಆನೆಗೂ ಕೊಕ್​ ನೀಡಲಾಗಿದೆ.

Suma ravi conventional hall Best Conventional hall in mandya 1
Share This Article
Leave a comment