ಚಾಮುಂಡಿ ದೇವಿ ದರ್ಶನಕ್ಕೆ ವಸ್ತ್ರ ಸಂಹಿತೆ : ಕನ್ನಡ ಪರ ಸಂಘಟನೆಯ ಒತ್ತಾಯ

Team Newsnap
1 Min Read

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಕ್ಕೆ ಆಗಮಿಸುವ ಭಕ್ತರಿಗೆ ಡ್ರೆಸ್‍ಕೋಡ್ ಕಡ್ಡಾಯ ಮಾಡಬೇಕೆಂಬ ಒತ್ತಾಯವನ್ನು ಹಲವು ಮಹಿಳಾ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳು ಹೇರಿವೆ.

ರಾಜ್ಯದ ಹಾಗೂ ಹೊರ ರಾಜ್ಯದ ಪ್ರಮುಖ ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರಸಂಹಿತೆ ಇದೆ. ಇದೇ ರೀತಿ ನಾಡದೇವತೆ ಚಾಮುಂಡಿ ದರ್ಶನಕ್ಕೂ ವಸ್ತ್ರಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಲಾಗಿದೆ.ಮಾಹಿತಿ ಒದಗಿಸಿದ ಕೊಳ್ಳೇಗಾಲ ತಹಶೀಲ್ದಾರ್‌ಗೆ 25 ಸಾವಿರ ದಂಡ : ಮಾಹಿತಿ ಹಕ್ಕು ಆಯೋಗದ ಆದೇಶ

ಚಾಮುಂಡಿ ದೇವಸ್ಥಾನದಲ್ಲಿ ಈವರೆಗೂ ಯಾವುದೇ ಡ್ರೆಸ್‍ಕೋಡ್ ಇರಲಿಲ್ಲ. ಹೀಗಾಗಿ ದೇವಾಲಯಕ್ಕೆ ಬರುವ ಭಕ್ತರು ತಮಗಿಷ್ಟ ಬಂದ ಉಡುಪು ಧರಿಸಿ ದೇವಸ್ಥಾನಕ್ಕೆ ಬರುತ್ತಿದ್ದರು.

ದೇವಸ್ಥಾನಕ್ಕೆ ಬರುವ ಕೆಲವು ಮಹಿಳೆಯರು, ಯುವತಿಯರು ಅರೆಬರೆ ಬಟ್ಟೆ ಹಾಕಿಕೊಂಡು ಬರುತ್ತಾರೆ. ಪುರುಷರು ಅರ್ಧ ಚಡ್ಡಿ ಧರಿಸಿ ಬರುತ್ತಾರೆ. ಇದು ದೇವಸ್ಥಾನದ ಗೌರವ, ಪಾವಿತ್ರ್ಯತೆ ವಾತಾವರಣ ಹಾಳು ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಸೀರೆ ಅಥವಾ ಚೂಡಿದಾರ, ಪುರುಷರಿಗೆ ದೇವಸ್ಥಾನ ಪ್ರವೇಶಕ್ಕೆ ಪಂಚೆ ಅಥವಾ ಪ್ಯಾಂಟ್ ಕಡ್ಡಾಯ ಮಾಡಿ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂದು ಹೋರಾಟ ಆರಂಭಿಸಿದ್ದಾರೆ.

ಸರ್ಕಾರಕ್ಕೆ, ಚಾಮುಂಡಿ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ಕೊಟ್ಟು ವಸ್ತ್ರಸಂಹಿತೆ ಜಾರಿಗೆ ಆಗ್ರಹಿಸಿದ್ದಾರೆ. ಸರ್ಕಾರ ಇದಕ್ಕೆ ಸ್ಪಂದಿಸದೆ ಇದ್ದರೆ ಬೀದಿಗೆ ಇಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇತ್ತ ಮಹಿಳಾ ಹಾಗೂ ಕನ್ನಡ ಪರ ಸಂಘಟನೆಗಳ ಕೂಗಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಕೂಡ ದನಿಗೂಡಿಸಿದ್ದು ವಸ್ತ್ರಸಂಹಿತೆ ಅಗತ್ಯವಿದೆ ಎಂದು ಹೇಳುವ ಮೂಲಕ ಹೋರಾಟಕ್ಕೆ ಬಲ ತುಂಬಿದ್ದಾರೆ.

Share This Article
Leave a comment