ಚಾಲಕ ರಹಿತ ವಿಮಾನ ಹಾರಾಟ ಚಿತ್ರದುರ್ಗದಲ್ಲಿ ಯಶಸ್ವಿ, DRDO ಐತಿಹಾಸಿಕ ಸಾಧನೆ

Team Newsnap
1 Min Read

ಸ್ವಾಯತ್ತ ಫ್ಲೈ ಇಂದ ವಿಂಗ್ ಟೆಕ್ನಾಲಜಿ ವಿಮಾನ ಯಶಸ್ವಿ ಹಾರಾಟ ನಡೆಸಲಾಗಿದೆ. ಚಿತ್ರದುರ್ಗದ DRDO ದಲ್ಲಿ ಚಾಲಕರಹಿತ ವಿಮಾನ ಹಾರಾಟ ಯಶಸ್ವಿಯಾಗಿ ನಡೆಸಲಾಗಿದೆ.

ವಿಮಾನ ಹಾರಾಟ ಪರೀಕ್ಷೆಯನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ನಡೆಸಲಾಗಿದ್ದು, ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ.

ಸಂಪೂರ್ಣ ಸ್ವಾಯತ್ತ ಮೋಡ್‌ ನಲ್ಲಿ ಕಾರ್ಯನಿರ್ವಹಿಸುವ ವಿಮಾನವು ಟೇಕ್-ಆಫ್, ವೇ ಪಾಯಿಂಟ್ ನ್ಯಾವಿಗೇಷನ್ ಮತ್ತು ಸುಗಮ ಟಚ್‌ ಡೌನ್ ಸೇರಿದಂತೆ ಪರಿಪೂರ್ಣ ಹಾರಾಟವನ್ನು ಪ್ರದರ್ಶಿಸಿದೆ. ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸಾಬೀತುಪಡಿಸುವುದು, ಅಂತಹ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಲಾಗಿದೆ.

ಮಾನವರಹಿತ ವೈಮಾನಿಕ ವಾಹನ(UAV)ವನ್ನು ಡಿ.ಆರ್‌.ಡಿ.ಒ.ದ ಪ್ರಮುಖ ಸಂಶೋಧನಾ ಪ್ರಯೋಗಾಲಯವಾದ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್(ಎಡಿಇ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಇದು ಸಣ್ಣ ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತವಾಗಿದೆ. ವಿಮಾನಕ್ಕೆ ಬಳಸಲಾದ ಏರ್‌ಫ್ರೇಮ್, ಅಂಡರ್‌ ಕ್ಯಾರೇಜ್, ಸಂಪೂರ್ಣ ಹಾರಾಟದ ನಿಯಂತ್ರಣ ಮತ್ತು ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ.

ಈ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಅಭಿನಂದಿಸಿದ್ದಾರೆ. ಡಿ.ಆರ್.ಡಿ.ಓ. ಸ್ವಾಯತ್ತ ವಿಮಾನಗಳ ಪ್ರಮುಖ ಸಾಧನೆ ಇದಾಗಿದೆ. ಆತ್ಮ ನಿರ್ಭರ ಭಾರತಕ್ಕೆ ದಾರಿ ಇದು ಎಂದು ಹೇಳಿದ್ದಾರೆ.

Share This Article
Leave a comment