November 25, 2024

Newsnap Kannada

The World at your finger tips!

drupathi murmu

ಸರಳ,ಪ್ರಾಮಾಣಿಕ ವ್ಯಕ್ತಿತ್ವದ ದ್ರೌಪದಿ ಮುರ್ಮು ರಾಷ್ಟ್ರಪತಿ ಹುದ್ದೆಗೆ ಒಂದು ಆದರ್ಶ

Spread the love

ಓಡಿಸ್ಸಾದ ಭುವನೇಶ್ವರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಶ್ರೀಮತಿ ವಿಜಯಾ ವಾಷ್ಣೆರ್ಯ ಅವರು ರಾಷ್ಟ್ರಪತಿ ಹುದ್ದೆಯ NDA ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಸರಳತೆ , ಸಾಮಾನ್ಯರ ರೀತಿಯಲ್ಲಿ ಬದುಕಿ ಬಂದ ಅವರ ಜೀವನದ ಒಂದು ಸತ್ಯ ಘಟನೆಯನ್ನು DC ವಿಜಯಾ ಸ್ಮರಿಸಿಕೊಂಡಿದ್ದಾರೆ.

ಭುವನೇಶ್ವರದಲ್ಲಿ ನಾನು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ವೇಳೆಯಲ್ಲಿ ಒಂದು ದಿನ ಮಧ್ಯಾಹ್ನ ಸರ್ಕಾರಿ ಪ್ರವಾಸ ಮುಗಿಸಿ ಕಚೇರಿಗೆ ಬಂದು ಕೆಲಸ ಮಾಡಲು ಮುಂದಾದೆ.

ಆಗ ಓರ್ವ ಮಹಿಳೆ ನನ್ನ ಕಚೇರಿ ಎದುರಿನ ಚೇರ್ ಮೇಲೆ ಕುಳಿತಿದ್ದಳು. ನಾನು ಅವಳನ್ನು ಒಳಗೆ ಕರೆದು ಬಂದ ಕಾರಣ ಕೇಳಿದಾಗ, ಆಕೆ ಬಹಳ ದಿನಗಳಿಂದ ತಾನು ಒಂದು ಅರ್ಜಿ ಸಲ್ಲಿಸಿದ್ದೇನೆ.

ತನ್ನ ಭೂಮಿಯನ್ನು ಮಾರಾಟ ಮಾಡಬೇಕಾಗಿದೆ ಅದಕ್ಕಾಗಿ ಅನುಮತಿ ಪತ್ರ ಬೇಕಾಗಿದೆ ಎಂದು ಕೇಳಿದಳು. ಆಕೆಯ ಕಡತ ( ಫೈಲ್ ) ತಪಾಸಣೆ ಮಾಡಿದಾಗ, ಆಕೆ ಈ ಮೊದಲು ಕೂಡ ಆ ಒಂದೇ ಜಮೀನು ಮಾರುವುದಕ್ಕೆ ಮೂರು ಸಲ ಪರವಾನಗಿ ಪಡೆದಿರುವ ಬಗ್ಗೆ ತನ್ನ ಗಮನಕ್ಕೆ ಬಂತು.

ಆದರೂ ಜಮೀನು ಮಾರಾಟ ಮಾಡದೇ ಇರುವ ಕಾರಣ ಕೇಳಿದಾಗ, ಆಕೆ ಹೇಳಿದ್ದು ಕೇಳಿ , ನನಗೆ ಮಾತೇ ಹೊರಡಲಿಲ್ಲ.ಮೊದಲ ಸಲ ಪರವಾನಗಿ ಪಡೆದಾಗ , ಅವಳ ಒಬ್ಬ ಪುತ್ರ ಆಕಸ್ಮಿಕವಾಗಿ ತೀರಿಕೊಂಡರು.

ಎರಡನೇ ಸಲ ಮಾರಾಟ ಮಾಡುವ ವೇಳೆ ತನ್ನ ಗಂಡ ಸಾವನ್ನಪ್ಪಿದ್ದನು. ಅದೆಲ್ಲಾ ಆಘಾತದಿಂದ ತಾನು ಹೊರಗೆ ಬರುತ್ತಿದ್ದಂತೆ, ಮೂರನೇ ಬಾರಿ ಅನುಮತಿ ಪಡೆದು ಮಾರಾಟ ಮಾಡುವ ವೇಳೆ ತನ್ನ ಏಕೈಕ ಆಧಾರವಾಗಿದ್ದ ಇನ್ನೊಬ್ಬ ಪುತ್ರ ಅಪಘಾತದಲ್ಲಿ ಅಸುನೀಗಿದ.

ಹೀಗಾಗಿ ಇದೀಗ ಸಾಲ ತೀರಿಸಲು ಈ ಜಮೀನನ್ನು ಮಾರಾಟ ಮಾಡುವ ಸಲುವಾಗಿ ನಾಲ್ಕನೇ ಬಾರಿಗೆ ಅನುಮತಿ ಪಡೆಯಲು ಬಂದಿರುವೆ ಎಂದಳು.

ನಾನು ಅವಳನ್ನು ಏನೂ ಪ್ರಶ್ನಿಸದೇ ಕೂಡಲೇ ಮಂಜೂರಾತಿ ಪತ್ರ ಅವಳ ಕೈಗೆ ಕೊಟ್ಟೆ. ಆ ಮಹಿಳೆ ಬೇರೆ ಯಾರೂ ಅಲ್ಲ, ಇದೀಗ ಭಾರತದ ರಾಷ್ಟ್ರಪತಿ ಚುನಾವಣೆಗೆ NDA ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀಮತಿ ದ್ರೌಪದಿ ಮುರ್ಮು

ದ್ರೌಪದಿ ಮೇಡಂ ಆಗ ಸ್ವತಃ ತಾವು ಓರಿಸ್ಸಾದ ಸಚಿವೆಯಾಗಿದ್ದರೂ ಕೂಡ ಇತರರಂತೆ ಧಿಮಾಕು ತೋರಿಸದೇ , ಸಾಮಾನ್ಯ ಪ್ರಜೆಗಳ ಹಾಗೆ ಕಚೇರಿಗೆ ಬಂದು ಸರದಿಯಲ್ಲಿ ನಿಂತು ತನ್ನ ಜಮೀನು ಮಾರಾಟ ಮಾಡುವ ಸಲುವಾಗಿ ಪರವಾನಗಿ ಪಡೆದರು.

ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ಚಿತ್ರೀಕರಣ ನಿಷೇಧ ತಡರಾತ್ರಿ ಆದೇಶ ವಾಪಸ್

ಸರಳ, ಸಜ್ಜನಿಕೆಯ ಸಾಮಾನ್ಯ ಮಹಿಳೆ ನಮ್ಮ ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದರೆ ಆಹುದ್ದೆಯ ಘನತೆ ಮತ್ತು ಆದರ್ಶ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದು ಒಟ್ಟಾರೆ ಅನಿಸಿಕೆ.

Copyright © All rights reserved Newsnap | Newsever by AF themes.
error: Content is protected !!