35 ವರ್ಷ ಮೇಲ್ಪಟ್ಟ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕದಲೂರಿನ ಡಾ ಸಂದೀಪ್ ಗೆ 2 ಚಿನ್ನದ ಪದಕ

Team Newsnap
1 Min Read

35 ವರ್ಷ ಮೇಲ್ಪಟ್ಟ ರಾಷ್ಟ್ರಮಟ್ಟದ ಹಿರಿಯರ ಮಾಸ್ಟರ್ಸ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಮದ್ದೂರು ತಾಲೂಕು ಕದಲೂರು ಗ್ರಾಮದ ಡಾ. ಸಂದೀಪ್ ಕೆ.ಟಿ ರವರು 2 ಚಿನ್ನದ ಪದಕ ಮತ್ತು 1 ಕಂಚಿನ ಪದಕ ಹಾಗೂ ರಾಜ್ಯಮಟ್ಟದ ಹಿರಿಯರ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 1 ಚಿನ್ನದ ಪದಕ ಮತ್ತು 1 ಬೆಳ್ಳಿಯ ಪದಕವನ್ನು ಪಡೆದುಕೊಂಡಿದ್ದಾರೆ.

2021ರ ಡಿ 11 ಮತ್ತು 12ರಂದು ಉಡುಪಿಯಲ್ಲಿ ನಡೆದ 41ನೇ ರಾಜ್ಯಮಟ್ಟದ ಮಾಸ್ಟರ್ಸ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 2 ಪದಕಗಳನ್ನು ಪಡೆದಿದ್ದಾರೆ.

ಹ್ಯಾಮರ್ ತ್ರೋನಲ್ಲಿ ಒಂದು ಚಿನ್ನದ ಪದಕ ಡಿಸ್ಕಸ್ ಥ್ರೋ ಒಂದು ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ನ. 11ರಿಂದ 14ರವರೆಗೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಮಂಡ್ಯದ ಡಾ. ಸಂದೀಪ್ ಕೆ.ಟಿ. ಇವರು 2 ಚಿನ್ನದ ಪದಕ 1 ಕಂಚಿನ ಪದಕ ಗೆದ್ದು ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಮೈಸೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಹ್ಯಾಮರ್ ತ್ರೋ ಮತ್ತು ಡಿಸ್ಕಸ್ ತ್ರೋನಲ್ಲಿ ತಲಾ ಒಂದೊಂದು ಚಿನ್ನದ ಪದಕ ಹಾಗೂ ಶಾಟ್ ಪುಟ್ ಎಸೆತದಲ್ಲಿ ಒಂದು ಕಂಚಿನ ಪದಕ ಪಡೆದು ಸಾಧನೆ ಮಾಡಿರುತ್ತಾರೆ. ಮುಂಬರುವ ಏಷ್ಯನ್ ಮಾಸ್ಟರ್ ಅಥ್ಲೇಟಿಕ್ ಕ್ರೀಡಾಕೂಟವು ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯಲಿದ್ದು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ವೋವೆಲ್ಸ್ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಶ್ರೀ ಎಂ.ಪಿ.ಚಂದ್ರಶೇಖರ್ ಹಾಗೂ ರವಿ.ಟಿ.ಎಸ್. ಅಸಿಸ್ಟೆಂಟ್ ಡೈರೆಕ್ಟರ್, ಫಿಸಿಕಲ್ ಎಜುಕೇಶನ್, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

Share This Article
Leave a comment