ಡಾ. ರಾಜ್ – ಅಚ್ಚುಮೆಚ್ಚು ಕಲ್ಪನಾ ,ಜಯಂತಿ, ಭಾರತಿ ಫೇವರಿಟ್ ಹೀರೊಯಿನ್ಸ್ – ಬೊಮ್ಮಾಯಿ

Team Newsnap
1 Min Read
BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ತಮ್ಮ ಆಲ್‌ಟೈಮ್ ಫೇವರಿಟ್ ಹೀರೋ ಡಾ.ರಾಜ್‌ಕುಮಾರ್. “ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು… ತುಂಬಾ ಇಷ್ಟವಾದ ಹಾಡು. “ಬಾನಿಗೊಂದು ಎಲ್ಲೆ ಎಲ್ಲಿದೆ..ನಿನ್ನಾಸೆಗೆಲ್ಲಿ ಕೊನೆಯಿದೆ..’ ಈ ಹಾಡೂ ನಂಗೆ ಸದಾ ಇಷ್ಟ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ‌

ನನ್ನ ಆಲ್‌ಟೈಮ್ ಫೇವರಿಟ್ ಹೀರೋಯಿನ್ ಹಿಂದಿಯ ಮಧುಬಾಲ. ಕನ್ನಡ ಚಿತ್ರರಂಗ ನಮ್ಮ ಕಾಲದ ಮೂವರು ಟಾಪ್ ಹೀರೋಹಿನ್‌ಗಳಾದ ಕಲ್ಪನಾ, ಜಯಂತಿ ಹಾಗೂ ಭಾರತಿ.
ಮುಖ್ಯಮಂತ್ರಿ ಯಾವುದೋ ಮಾಧ್ಯಮ ಸಂದರ್ಶನದಲ್ಲಿ ಈ ವಿಷಯ ಹೇಳಲಿಲ್ಲ. ಬದಲಿಗೆ ಮಕ್ಕಳು ಕೇಳಿದ ಪ್ರಶ್ನೆಗೆ ಯಾವುದೇ ಸಂಕೋಚವಿಲ್ಲದೆ ನಗುಮುಖ ದಿಂದಲೇ ಉತ್ತರಿಸಿದರು.

ಬೆಂಗಳೂರಿನಲ್ಲಿ ನಡೆದ ಖಾಸಗಿ ವಾಹಿನಿಯ ೧೫ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅಲ್ಲಿ ನೆರೆದಿದ್ದ ಮಕ್ಕಳಿಂದ ತೂರಿಬಂದ ಪ್ರಶ್ನೆಗಳಿಗೆ ಸಹಜವಾಗಿಯೇ ಪ್ರತಿಕ್ರಿಯಿಸಿದರು.

ಚಲನಚಿತ್ರಗಳಲ್ಲಿ ಕಂಡುಬರುವ ಮುಖ್ಯಮಂತ್ರಿ ಬೇರೆ ರೀತಿಯಲ್ಲಿರುತ್ತಾರೆ. ಸಾರ್ ನೀವು ಬಹಳ ಸಿಂಪಲ್ ಆಗಿದ್ದೀರಲ್ಲ ಎಂಬುದಕ್ಕೆ ನಗುತ್ತಲೇ, ಅದು ಸಿನಿಮಾ, ಅಲ್ಲಿ ಆರ್ಭಟ ಇರಬೇಕು. ಹಾಗಿದ್ದರೇನೇ ಜನರು ಸಿನಿಮಾ ನೋಡೋಕೆ ಬರುತ್ತಾರೆ. ಆದರೆ ನಿಜ ಜೀವನದಲ್ಲಿ ನಾವು ಆರ್ಭಟ ಮಾಡಿದರೆ ಜನರು ಕೇಳಲ್ಲ. ಇಲ್ಲಿ ಸಿಂಪಲ್ಲಾಗಿಯೇ ಇರಬೇಕೆಂದರು.

ನಮ್ಮ ತಾಯಿ ಮಾಡುತ್ತಿದ್ದ ಬಿಸಿಬಿಸಿ ಜೋಳದ ರೊಟ್ಟಿ ನನಗೆ ಬಹಳ ಇಷ್ಟ. ಅದಕ್ಕೆ ತುಪ್ಪ ಹಾಕೊಂಡು ತಿನ್ನಲು ಆರಂಭಿಸಿದರೆ ಲೆಕ್ಕವೇ ಇರೋಲ್ಲ. ಈಗ ನಮ್ಮ ತಾಯಿ ಇಲ್ಲ. ಯಾರೆ ಬಿಸಿ ರೊಟ್ಟಿ ಮಾಡಿದರೂ ನಮ್ಮಮ್ಮನೇ ಮಾಡಿದ್ದಾರೆಂದು ಕೊಂಡು ತಿನ್ನುತ್ತೇನೆ.

ನಿಮ್ಮನ್ನು ನೋಡಿದ ಮೇಲೆ ನನಗೂ ಮೊಮ್ಮಕ್ಕಳು ಬೇಕು ಅನ್ನಿಸುತ್ತಿದೆ. ಈ ವಿಷಯವನ್ನು ನನ್ನ ಮಗನಿಗೆ ತಿಳಿಸುತ್ತೇನೆ ಎಂದು ವಿನೋದದಿಂದ ನುಡಿದರು ಬಸವರಾಜ ಬೊಮ್ಮಾಯಿ.

ನಾನು ಸಿಎಂ ಅಂದರೆ ಕಾಮನ್‌ಮ್ಯಾನ್ ಎಂದು ಹೇಳುವ ಮೂಲಕ ಬೊಮ್ಮಾಯಿ ಸಭಿಕರ ಹೃದಯ ಗೆದ್ದರು.

Share This Article
Leave a comment