ರಾಜ್ಯ ಸರ್ಕಾರ ಸಿ.ಎನ್.ಮಂಜುನಾಥ್ ಸೇವಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. ನಿರ್ದೇಶಕರಾಗಿ ಅವಧಿ ಮುಕ್ತಾಯವಾದ ಹಿನ್ನೆಲೆ ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಅವರ ಸೇವಾವಧಿ ವಿಸ್ತರಿಸಲಾಗಿದೆ.ಇದನ್ನು ಓದಿ –ಮಡಿಕೇರಿ ಖಜಾನೆ ಇಲಾಖೆ ಗುಮಾಸ್ತ 5 ಸಾವಿರ ರು ಲಂಚ ಸ್ವೀಕರಿಸುವ ವೇಳೆ ACB ಬಲೆಗೆ
ಡಾ. ಸಿ.ಎನ್.ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ ಮುಖ್ಯಮಂತ್ರಿಗಳು ಮುಂದುವರಿಸಿದ್ದಾರೆ.
ತಮ್ಮ ಸೇವಾವಧಿ ವಿಸ್ತರಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಮಂಜುನಾಥ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್.ಮಂಜುನಾಥ್ ನಾಳೆಗೆ ಅಂತ್ಯವಾಗುತ್ತಿತ್ತು ಅವರನ್ನೇ ಮುಂದುವರಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಾಯವಾಗಿತ್ತು. ಮಂಜುನಾಥ್ ಅವರನ್ನು ಮುಂದುವರಿಸುವಂತೆ ಅನೇಕ ಕಡೆ ಪ್ರತಿಭಟನೆಗೂ ಕರೆ ನೀಡಲಾಗಿತ್ತು. ಅಷ್ಟರಲ್ಲೇ ಎಚ್ಚೆತ್ತ ಸರ್ಕಾರ ಸೇವಾವಧಿ ವಿಸ್ತರಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು