January 10, 2025

Newsnap Kannada

The World at your finger tips!

pooja

ವರದಕ್ಷಿಣೆ ಕಿರುಕುಳ : ನದಿಗೆ ಜಿಗಿದು ನವವಿವಾಹಿತೆ ಆತ್ಮಹತ್ಯೆ – ಐದು ದಿನದ ಬಳಿಕ ಶವ ಪತ್ತೆ

Spread the love

ವರದಕ್ಷಿಣೆ ಕಿರುಕುಳವನ್ನು ತಾಳಲಾರದೇ ನದಿಗೆ ಹಾರಿ ನವವಾಹಿತೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಐದು ದಿನಗಳ ನಂತರ ಶವ ಪತ್ತೆಯಾಗಿದೆ.

ಪೂಜಾ(20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ.

ಆಗಸ್ಟ್ 5 ರಂದು ಸಕಲೇಶಪುರದ ಹೇಮಾವತಿ ಸೇತುವೆಗೆ ಹಾರಿ ಪೂಜಾ ಆತ್ಮಹತ್ಯೆಗೆ ಮಾಡಿಕೊಂಡಿದ್ದರು.

5 ದಿನದಿಂದ ಮಗಳ ಮೃತ ದೇಹಕ್ಕಾಗಿ ದಿನವೂ ಹೊಳೆಯ ಬಳಿ ಪೋಷಕರು ಹುಡುಕಾಟ ಮಾಡುತ್ತಿದ್ದರು.‌ ಸಕಲೇಶಪುರ ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಸತತ ಹುಡುಕಾಟ ನಡೆಸಿತ್ತು. ಇದೀಗ ಪೂಜಾ ಮೃತದೇಹ ಸಿಕ್ಕಿದೆ.

ಚನ್ನರಾಯಪಟ್ಟಣ ತಾಲೂಕಿನ ಬೆಕ್ಕಾ ಗ್ರಾಮದ ಪೂಜಾ, ಸಕಲೇಶಪುರ ಅಶ್ವಥ್ ನನ್ನ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದು ಪೂಜಾರವರ ಪೋಷಕರು 8 ತಿಂಗಳ ಹಿಂದೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಆದರೆ ಅದನ್ನು ದಿಕ್ಕರಿಸಿ ಪೂಜಾ ಅಶ್ವಥ್ ಎಂಬಾತನನ್ನು ಮದುವೆಯಾಗಿದ್ದಳು. ನಂತರ ಪ್ರೀತಿಸಿ ಮದುವೆಯಾದ ಯವಕನ ಹಾಗೂ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದರು ಎಂಬ ಆರೋಪ ಪೂಜಾಳ ಪೋಷಕರದ್ದು.

Copyright © All rights reserved Newsnap | Newsever by AF themes.
error: Content is protected !!