ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳ : ಮಹಿಳಾ ಟೆಕ್ಕಿ ಆತ್ಮಹತ್ಯೆ

Team Newsnap
1 Min Read

ಬೆಂಗಳೂರು : ವರದಕ್ಷಿಣೆ ಕಿರುಕುಳ ಹಾಗೂ ಕಲಹದಿಂದ ಬೇಸತ್ತ ವಿವಾಹಿತ ಮಹಿಳಾ ಟೆಕ್ಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜೋಗುಪಾಳ್ಯದಲ್ಲಿ ನಡೆದಿದೆ.

ದಿವ್ಯಾ(30) ಆತ್ಮಹತ್ಯೆಗೆ ಶರಣಾದ ಮಹಿಳೆ.

WhatsApp Image 2023 07 18 at 9.33.49 AM

ದಿವ್ಯಾ 2014 ರಲ್ಲಿ ಅರವಿಂದ್ ಥಾಣಿಕ್​ ಎಂಬ ಟೆಕ್ಕಿಯನ್ನು ವಿವಾಹವಾಗಿದ್ದಳು. ಈ ದಂಪತಿಗೆ ಎರಡು ಮಕ್ಕಳಿದ್ದಾರೆ.

ಮದುವೆಯ ನಂತರ ಆಕೆಗೆ ಗಂಡನ ಮನೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ದಿವ್ಯಾ ಪೋಷಕರು ಆರೋಪಿಸಿದ್ದಾರೆ.

ಸೋಮವಾರದಂದು ದಿವ್ಯಾ ಡೋರ್ ಲಾಕ್ ಮಾಡಿಕೊಂಡಿದ್ದಾಳೆಂದು ಪತಿ ಅರವಿಂದ್ ಅತ್ತೆ ಮನೆಯವರಿಗೆ ಕರೆ ಮಾಡಿ ಹೇಳಿದ್ದಾನೆ. ಆದರೆ ದಿವ್ಯಾ ಮನೆಯವರು ಬಂದು ನೋಡಿದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ದಿವ್ಯಾ ಸಾವನ್ನಪ್ಪಿದ್ದಾಳೆ.ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ : ಪಿರಿಯಾಪಟ್ಟಣ ಬಳಿ ಮೂವರ ಸಾವು

ಪತಿ ಅರವಿಂದ್ ಅವರನ್ನು ಹಲಸೂರು ಪೋಲಿಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ

Share This Article
Leave a comment