December 23, 2024

Newsnap Kannada

The World at your finger tips!

d6e61f59 eb85 4c24 9094 ddf9a8d5d79c

ಮಗಳಿಗೆ ವರದಕ್ಷಿಣೆ ಕಿರುಕುಳ : ತಿಂಗಳ ತಿಥಿ ದಿನವೇ ಅಳಿಯನ ಮನೆ ಮುಂದೆ ಆತ್ಮಹತ್ಯೆ

Spread the love

ಮಗಳ ತಿಂಗಳ ತಿಥಿ ಮಾಡಲು ಬಂದಿದ್ದ ಅಪ್ಪ, ಅಳಿಯನ ಮನೆಯ ಎದುರೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.

ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಮೃತ ವ್ಯಕ್ತಿ.

e8d8c835 562c 4009 b085 058ae8d0ff2f

ಮೃತರ ಪುತ್ರಿ ಹೇಮಶ್ರೀ ಅ.30 ರಂದು ಸಾವನ್ನಪ್ಪಿದ್ದರು. ಮಗಳ ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್​ ನಿನ್ನೆ ಮಾಳೆಗೆರೆ ಗ್ರಾಮಕ್ಕೆ ಆಗಮಿಸಿದ್ದರು.

ಆದರೆ ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ಮನೆಗೆ ಬೀಗ ಹಾಕಿ ತೆಳಿದ್ದರು. ಮಗಳ ತಿಥಿ ಕಾರ್ಯಕ್ಕೆ ಮಾಡಲು ಬೆಳಗ್ಗೆಯಿಂದ ಕಾದರು ಯಾರು ಬಾರದ ಹಿನ್ನೆಲೆಯಲ್ಲಿ, ಮನೆಯ ಬಾಗಿಲ ಬಳಿಯೇ ಎಡೆ ಇಟ್ಟಿರೋ ನಾಗರಾಜ್​, ಬಳಿಕ ಮನನೊಂದು ಮೊಬೈಲ್​​​ನಲ್ಲಿ ವಿಡಿಯೋ ಮಾಡಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ
ನನ್ನ ಮಗಳ ಸಾವಿಗೆ ಪತಿ ಪ್ರವೀಣ್, ಅತ್ತೆ ಭದ್ರಮ್ಮ ಹಾಗೂ ಸೋಮಣ್ಣ ಎಂಬವರೇ ಕಾರಣ, ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ. ದಯಮಾಡಿ ಅವರನ್ನು ಸಾಯುವವರೆಗೂ ಜೈಲಿಗೆ ಹಾಕಿ ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅರೇಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಕುಟುಂಬಸ್ಥರಿಗೆ ಹುಡುಕಾಟ ಮಾಡುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!