ರಾಜ್ಯ ಸರ್ಕಾರದ ನಿರ್ಧಾರದಂತೆ ಜಿಲ್ಲೆಯಲ್ಲೂ ಲಾಕ್ ಡೌನ್ ಮಾಡಲು ಜನರ ಸಹಕಾರ ಇರುತ್ತದೆ. ಆದರೆ ಪೋಲಿಸರು ವಿನಾಕಾರಣ ಲಾಕ್ ಡೌನ್ ವೇಳೆ ಜನರ ಮೇಲೆ ಲಾಠಿ ಪ್ರಹಾರ ಮಾಡಿ ತೊಂದರೆ ಕೊಡದಂತೆ ನೋಡಿಕೊಳ್ಳಿ. ಮಾನವೀಯತೆಯಿಂದ ವರ್ತಿಸಲು ಪೋಲಿಸರಿಗೆ ಹೇಳಿ.
ಇದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ “ಕೋವಿಡ್ ತುರ್ತು ಸಭೆ” ಯಲ್ಲಿ ಜಿಲ್ಲಾಮಂತ್ರಿ ಹಾಗೂ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಅವರ ಗಮನ ಸೆಳೆಯುವ ಸಲಹೆ ನೀಡಿದರು.
ಈ ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು:
- ಮೃತ ದೇಹ ವಿಲೇವಾರಿಗೆ ತಡ ಮಾಡಿದ ಕ್ರಮ ಖಂಡಿಸಿ ಈ ವಿಚಾರವಾಗಿ ಜಿಲ್ಲಾಡಳಿತ ವನ್ನು ಶಾಸಕ ರವೀಂದ್ರ ತರಾಟೆಗೆ ತೆಗೆದುಕೊಂಡರು.
2. ಗರ್ಕಳ್ಳಿಯ ಗೌರಮ್ಮ ಎಂಬುವರು ನಿನ್ನೆ ಕೋವಿಡ್ ಸೋಂಕಿನಿಂದ ಮೃತಪಟ್ಟು 24 ಗಂಟೆಗಳಾದರೂ ಆಂಬುಲೆನ್ಸ್ ಇಲ್ಲವೆಂಬ ಕಾರಣ ನೀಡಿ ಮೃತ ದೇಹವನ್ನು ಸಂಬಂಧಿಕರಿಗೆ ಒಪ್ಪಿಸದೇ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಮಂಜೆಗೌಡರನ್ನು ತರಾಟೆಗೆ ತೆಗೆದುಕೊಂಡು ತಕ್ಷಣವೇ ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿದರು ಶಾಸಕ ರವೀಂದ್ರ ಶ್ರೀಕಂಠಯ್ಯ.
3. ಪಾಸಿಟಿವ್ ಪ್ರಕರಣಗಳ ವಾಸ್ತವಿಕ ಅಂಕಿ ಅಂಶಗಳನ್ನು ಮರೆ ಮಾಚಿರುವುದು ಯಾಕೆ ಎಂಬುದು ಶಾಸಕರ ಪ್ರಮುಖ ಪ್ರಶ್ನೆ
ICMR ಪೋರ್ಟಲ್ ನಲ್ಲಿ ದಾಖಲಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತು ಪರಿಹಾರ ಪೋರ್ಟಲ್ ನಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಸಾವಿರಕ್ಕೂ ಹೆಚ್ಚು ವ್ಯತ್ಯಾಸವಿರುವ ಬಗ್ಗೆ DHO ಹಾಗೂ ಮಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು.
ಕೋವಿಡ್ ಸಂದರ್ಭ ತಾತ್ಕಾಲಿಕ ಡಿ ಗ್ರೂಪ್ ಸಿಬ್ಬಂದಿ ನೇಮಕಾತಿ ಮತ್ತು ವೇತನ ಪಾವತಿ ವಿಚಾರದಲ್ಲಿ ತಾರತಮ್ಯ ಕುರಿತ ಸ್ಪಷ್ಟೀಕರಣ ಕೋರಿದರು.
ಕೋವಿಡ್ ಸಂದರ್ಭ ಡಿ ಗ್ರೂಪ್ ನೌಕರರ ಕೊರತೆಗೆ ಅವರಿಗೆ ನೀಡುತ್ತಿರುವ ಕಡಿಮೆ ವೇತನ ಕಾರಣವೆಂದು ಹಾಗೂ ಸರ್ಕಾರದಿಂದ ಹೆಚ್ಚಿನ ವೇತನ ನೀಡಲು ಅವಕಾಶಗಳಿದ್ದರೂ ಸಹಾ ಕೊಡದಿರುವ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ಆಡಳಿತವನ್ನು ತರಾಟೆಗೆ ತೆಗೆದುಕೊಂಡ ಶಾಸಕರಾದ ರವೀಂದ್ರ ಶ್ರೀಕಂಠಯ್ಯ ರವರು ಅವರುಗಳ ವೇತನ ಹೆಚ್ಚು ಮಾಡಿಸುವುದರ ಮೂಲಕ ಮತ್ತೊಮ್ಮೆ ತಮ್ಮ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು.
ಲಾಕ್ ಡೌನ್ ಸಮಯದಲ್ಲಿ ಪಕ್ಕದ ಮೈಸೂರು ಜಿಲ್ಲೆಗೆ ತಾಲೂಕಿನ ಬಹಳಷ್ಟು ಮಂದಿ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳಿಗಾಗಿ ಹೋಗುವ ಸಂದರ್ಭ ಚೆಕ್ ಪೋಸ್ಟ್ ಗಳಲ್ಲಿ ತೊಂದರೆಯಾಗದಂತೆ ಮೈಸೂರು ಜಿಲ್ಲಾಧಿಕಾರಿ ಮತ್ತು ಎಸ್ಪಿ ಯವರೊಂದಿಗೆ ಮಾತನಾಡಿ ಸೂಕ್ತ ಏರ್ಪಾಡು ಮಾಡುವಂತೆ ಮಂಡ್ಯ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಅವರಿಗೆ ತಿಳಿಸಿದರು.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ