ಶಾಲಾ ವಿದ್ಯಾರ್ಥಿಗಳಿಗೆ ಹೆಬ್ಬುಲಿ, ಪೆಪ್ಸಿ ಸೇರಿದಂತೆ ವಿಚಿತ್ರವಾದ ಹೇರ್ ಕಟ್ ನ್ನು ಮಾಡಬೇಡಿ ಎಂದು ಶಿಕ್ಷಕರೊಬ್ಬರು ಸವಿತಾ ಸಮಾಜದ ಸಂಘದ ಅಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನಿಂದ ಶಾಲೆಗೆ ಬರಬೇಕೆಂಬುದು ಶಿಕ್ಷಣ ಇಲಾಖೆಯ ನಿಯಮವಾಗಿದ್ದು, ಆದರೆ ಮಕ್ಕಳು ಹೆಬ್ಬುಲಿ, ಸ್ಪೈಕ್ ಸೇರಿದಂತೆ ಚಿತ್ರ ವಿಚಿತ್ರ ಕೇಶ ವಿನ್ಯಾಸ ಮಾಡಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಮಕ್ಕಳನ್ನು ಗುರುತು ಹಿಡಿಯುವುದೇ ಕಷ್ಟವಾಗಿದೆ ಎಂದು ಶಿಕ್ಷಕ ಶಾಂತರಾಜು ಅಳಲು ತೋಡಿಕೊಂಡಿದ್ದಾರೆ.

ಕೊಳ್ಳೇಗಾಲದ ಬಾಪುನಗರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಾಂತರಾಜು ಎಂಬವರು ಈ ಪತ್ರವನ್ನು ಬರೆದು ಸವಿತಾ ಸಮಾಜ ಸಂಘದ ಅಧ್ಯಕ್ಷರಿಗೆ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾದ ಹೇರ್ ಕಟಿಂಗ್ ಮಾಡಲು ಹೇರ್ ಸಲೂನ್ ಗಳಿಗೆ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.