Karnataka

ಸೋಲಿಗೆ ಹತಾಶಯ ಬೇಡ,ದೃಢ ಸಂಕಲ್ಪದಿಂದ ಮುನ್ನುಗ್ಗಿ – ಎಂ.ಕೆ. ಸವಿತ

ಮೈಸೂರು : ಸೋಲಿಗೆ ಹತಾಶರಾಗಬೇಡಿ. ದೃಢ ಸಂಕಲ್ಪ ಮಾಡಿ ಮುನ್ನುಗಿದರೆ ಗೆಲುವು ಸುಲಭ ಎಂದು ಮೈಸೂರು ವಿಭಾಗದ ಪ್ರವಾಸೋಧ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತ ಕರೆನೀಡಿದರು .

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಗಂಗಾ ಸಭಾಂಗಣದಲ್ಲಿ ನಡೆಯುತ್ತಿರುವ 50 ದಿನಗಳ ಕೆಎಎಸ್‌ ಮತ್ತು ಇತರ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸಾಧನೆ ಮಾಡಲೇ ಬೇಕು ಎಂಬ ತುಡಿತ ಇದ್ದರೆ ಯಾರು ಏನು ಬೇಕಾದರೂ ಸಾಧಿಸಬಹುದು. ಆದರೆ ಅದಕ್ಕೆ ಪರಿಶ್ರಮ ಬೇಕು. ಆಸೆಗೆ ತಕ್ಕ ಕನಸು ಕಾಣಿರಿ, ಅದಕ್ಕೆ ಪೂರಕವಾಗುವಂತೆ ಉತ್ತಮ ತಯಾರಿ ಮಾಡಿಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಎರಡು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು ಏನನ್ನು ಓದಬೇಕು ಎಂಬುದನ್ನು ಒಂದು ಟಿಪ್ಪಣಿ ಮಾಡಿಟ್ಟುಕೊಳ್ಳಬೇಕು. ಅದಕ್ಕೆ ಮಾದರಿ ಪ್ರಶ್ನೆಪತ್ರಿಕೆಗಳ ಸಹಾಯ ತೆಗೆದುಕೊಳ್ಳಬಹುದು. ಎರಡನೆಯದು ಪುನರ್‌ಅಧ್ಯಯನ. ಯಾವುದೇ ವಿಷಯ ಅಥವಾ ಸಂಗತಿಯನ್ನು ಒಂದೇ ಬಾರಿ ಓದಿ ಮುಗಿಸುವುದಕ್ಕಿಂತ ಅದನ್ನು ಸಮಯ ಸಿಕ್ಕಾಗೆಲ್ಲ ಪುನರ್ ಅಧ್ಯಯನ ಮಾಡಬೇಕು. ಮುಕ್ತವಾಗಿ ಚರ್ಚೆ ಮಾಡುವ, ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಆಸಕ್ತಿ ಇರುವ ಗುಂಪಿನೊಂದಿಗೆ ಚರ್ಚೆಸುತ್ತಿದ್ದರೆ ಅವುಗಳೆಲ್ಲ ಪರೀಕ್ಷೆಗೆ ನೆರವಾಗುತ್ತವೆ ಎಂದು ತಾವು ಕೆಎಎಸ್‌ ಪರೀಕ್ಷೆಗೆ ತಯಾರಾದ ಬಗ್ಗೆ ವಿವರಣೆ ನೀಡಿ ಪರೀಕ್ಷಾರ್ಥಿಗಳನ್ನು ಹುರಿದುಂಬಿಸಿ , ಹತಾಶೆ ಬಿಡಿ ದೃಢಸಂಕಲ್ಪ ಮಾಡಿ ಎಂದು ಕರೆ ನೀಡಿದರು.

​ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಹೆಚ್ಚಿನ ಒತ್ತು ನೀಡುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ನಶಿಸಿ ಹೋಗುತ್ತಿವೆ. ಪ್ರೀತಿ ವಿಶ್ವಾಸ ಸಂಬಂಧಗಳಿಗಿಂತ ಹಣ, ಅಧಿಕಾರವೇ ಹೆಚ್ಚಾಗಿದೆ. ಯುವಕರು ಈ ಕುರಿತು ಚಿಂತಿಸಬೇಕು. ಎಷ್ಟೇ ಎತ್ತರದ ಹುದ್ದೆಗೆ ಹೋದರು ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡಬೇಕು, ಶಿವ ಶರಣರ ಅರಿವೇ ಗುರು ಎಂಬ ಅಂಶವನ್ನು ಮನನ ಮಾಡಿಕೊಳ್ಳಬೇಕು ಎಂದರು.ಪೆಟ್ರೋಲ್ ಡಿಸೇಲ್ ಮೇಲಿನ ಸೆಸ್ ದರ ಹೆಚ್ಚಿಸಿದ ರಾಜ್ಯ ಸರ್ಕಾರ

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ, ಶೈಕ್ಷಣಿಕ ಡೀನ್‌ ಪ್ರೊ. ಎನ್‌. ಲಕ್ಷ್ಮಿ, ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿಗಳಾದ ಸಿದ್ದೇಶ್‌ ಹೊನ್ನೂರ್‌, ಗಣೇಶ್‌ ಕೆ.ಜಿ.ಕೊಪ್ಪಲ್‌ ಇದ್ದರು.

Team Newsnap
Leave a Comment

Recent Posts

ಸರ್ಕಾರಿ ನೌಕರರಿಗೆ 27% ವೇತನ ಹೆಚ್ಚಳ : ಸಿಎಂ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರರಿಗೆ ಶೇಕಡಾ 27 %ರಷ್ಟು ವೇತನ… Read More

June 20, 2024

KSRTC ಬಸ್ ಟಿಕೆಟ್ ದರ ಹೆಚ್ಚಳ..?

ಬೆಂಗಳೂರು : ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ರಾಜ್ಯದಲ್ಲಿ KSRTC ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಬಗ್ಗೆ ಸುಳಿವು… Read More

June 19, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಜೂನ್ 19 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,200 ರೂಪಾಯಿ ದಾಖಲಾಗಿದೆ. 24… Read More

June 19, 2024

ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬೆಂಗಳೂರು: ಪವಿತ್ರಾ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು , ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ… Read More

June 18, 2024

ಪೆಂಡ್ರೈವ್ ಕೇಸ್ : ಪ್ರಜ್ವಲ್‌ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು : 42ನೇ ಎಸಿಎಂಎಂ ನ್ಯಾಯಾಲಯ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಅವರಿಗೆ 14 ದಿನಗಳ ನ್ಯಾಯಾಂಗ… Read More

June 18, 2024

ನಾಳೆ ಜೆಡಿಎಸ್ ನಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ದರ ಹೆಚ್ಚಿಸಿದ್ದನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದ್ದು… Read More

June 17, 2024