OLX​ನಲ್ಲಿ ದೋಖಾ: ಫ್ರಿಡ್ಜ್ ಮಾರಲು ಹೋಗಿ 78 ಸಾವಿರ ರು ಮಹಿಳೆಗೆ ಪಂಗನಾಮ !

Team Newsnap
1 Min Read

ಓಎಲ್ಎಕ್ಸ್ ನಲ್ಲಿ ಫ್ರಿಡ್ಜ್ ಮಾರಲು ಹೋಗಿ ಮಹಿಳೆಯೊಬ್ಬರು 78,000 ಸಾವಿರ ರು ಹಣ ಕಳೆದುಕೊಂಡ ಘಟನೆ
ಬೆಂಗಳೂರಿನಲ್ಲಿ ಜರುಗಿದೆ.

ಓಎಲ್ಎಕ್ಸ್ ನಲ್ಲಿ ಫ್ರಿಡ್ಜ್ ಮಾರೋದಾಗಿ ಮಹಿಳೆಯೊಬ್ಬರು ಪೋಸ್ಟ್​ ಮಾಡಿದ್ದಾರೆ. ಇದನ್ನು ಗಮನಿಸಿದ ವಂಚಕ ರೇಟ್​ ಕೇಳಿದ್ದಾನೆ. 11 ಸಾವಿರಕ್ಕೆ ಕೋಡೋದಾಗಿ ಮಹಿಳೆ ಹೇಳಿದ್ದು 15 ಸಾವಿರ ರು ಕೊಟ್ಟು ಖರೀದಿಸುವುದಾಗಿ ವಂಚಕ ನಂಬಿಸಿದ್ದಾನೆ.

ನಾವು ಕೇಳಿದ ಹಣಕ್ಕಿಂತ ಹೆಚ್ಚಿಗೆ ಹಣ ಬರುತ್ತೆ ಎಂದು ಮಹಿಳೆ ಫ್ರೀಡ್ಜ್​ ಮಾರಲು ತಯಾರಾಗಿದ್ದಾರೆ.
ಇನ್ನು ಹಣ ಕಳಿಸುವ ಮೊದಲು ಖಾತೆಯ ದೃಢೀಕರಣ ಮಾಡಿಕೊಳ್ಳುವ ನೆಪವೊಡ್ಡಿ ತಮ್ಮ QR ಕೋಡ್​ಗೆ 5 ರೂಪಾಯಿ ಕಳಿಸುವಂತೆ ಹೇಳಿದ್ದಾನೆ.

ನಂತರ ಅದು ಕಟ್ ಆಗಿ ನಿಮಗೆ ರಿಫಂಡ್​ ಆಗುತ್ತೆ ಎಂದು ಯಾಮಾರಿಸಿದ್ದಾನೆ. ಮಾತಿನಂತೆ 5 ರೂಪಾಯಿ ರಿಫಂಡ್​ ಆಗಿದೆ, ಆ ಮೇಲೆ 15000 ಸಾವಿರ ರೂಪಾಯಿ ಕಳಿಸಿ ನಾನು ಒಟ್ಟಿಗೆ 30 ಸಾವಿರ ಹಾಕುತ್ತೇನೆ ಎಂದಿದ್ದಾನೆ. ಆತನ ಮಾತು ನಂಬಿ ಮಹಿಳೆ ಹಣ ಹಾಕಿದ್ದಾರೆ. ಹೀಗೆ ಹಣ ಹಾಕುತ್ತಾ ಸುಮಾರು 78 ಸಾವಿರ ರೂಪಾಯಿಯನ್ನು ಮಹಿಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ನಂತರ ಅದು ಕಟ್ ಆಗಿ ನಿಮಗೆ ರಿಫಂಡ್​ ಆಗುತ್ತೆ ಎಂದು ಯಾಮಾರಿಸಿದ್ದಾನೆ. . ಆತನ ಮಾತು ನಂಬಿ ಮಹಿಳೆ ಹಣ ಹಾಕಿದ್ದಾರೆ. ಹೀಗೆ ಹಣ ಹಾಕುತ್ತಾ ಸುಮಾರು 78 ಸಾವಿರ ರು ಮಹಿಳೆ ಕಳೆದುಕೊಂಡಿದ್ದಾರೆ.

Share This Article
Leave a comment