60ನೇ ವಯಸ್ಸಿಗೆ ನಿರಾಂತಕ ಬದುಕಿನ ಸರಳ ಸೂತ್ರಗಳು

Team Newsnap
5 Min Read

ಡಾ. ಅಮಿತ್ .ಎಸ್
ಅರವಳಿಕೆ ತಜ್ಞರು, ಬೆಂಗಳೂರು

ಭೀಕರ ಮಾಹಾಮಾರಿಗೆ ಬಲಿಯಾದವರಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚಿನ ಸಂಖ್ಯೆಯವರು. ರೋಗ ನಿರೋಧಕ ಶಕ್ತಿ ಕಡಿಮೆಯಾದವರಿಗೆ ಸೋಂಕು ಬಹಳ ಬೇಗ ತಗಲುತ್ತದೆ.
ಅಲ್ಲದೆ ಶ್ವಾಸಕೋಶಗಳು ವಯೋಸಹಜವಾಗಿ ಕುಗ್ಗಿರುತ್ತದೆ. ಇದು ಕೊರೊನಾಗೆ ಅನುಕೂಲ. ಹೀಗಾಗಿ ವಯಸ್ಸಾದವರು ಎಚ್ಚರಿಕೆವಹಿಸುವುದು ಅಗತ್ಯ. ಈ ವಯೋಮಾನದವರು
ಮಾಸ್ಕ್ ಧರಿಸಬೇಕು. ಅದು ಉಸಿರಾಟಕ್ಕೆ ತೊಂದರೆ ಎಂಬ ಭಾವನೆ ಸಹಜ. ಮನೆಯಲ್ಲೇ ಇರುವುದಾದರೆ ಬೇಕಿಲ್ಲ. ಆದರೆ ಮನೆ ಹೊಸ್ತಿಲು ದಾಟಬೇಕಾದರೆ ಮಾಸ್ಕ್
ಧರಿಸಲೇಬೇಕು.
ಸಾಮಾನ್ಯವಾಗಿ ವಯಸ್ಸಾದವರಿಗೆ ಬೇರೆಯವರ ಜೊತೆ ಹೆಚ್ಚು ಮಾತನಾಡಿಸುವ ಚಪಲ. ಅಲ್ಲದೆ ಟೈಮ್ ಪಾಸ್ ಮಾಡಲು ಹಾಕಿಕೊಂಡು ಸರಳೋಪಾಗಳು. ಹೊರಗಿನವರು ಅದರಲ್ಲೂ ಅಪರಿಚಿತರ ಹತ್ತಿರ ಹೋಗಬಾರದು. ಹೊರಗಿನಿಂದ ಬಂದವರು ಕೂಡ ದೂರದಲ್ಲೇ ನಿಂತು ಮಾತನಾಡುವುದು ಒಳ್ಳೆಯದು. ಇದರಿಂದ ವಯಸ್ಸಾದವರನ್ನು ರಕ್ಷಿಸಬಹುದು. ಬೇರೆ ಯಾರನ್ನೂ ಭೇಟಿಯಾಗಲು ಹೋಗಲೇಬಾರದು. ಅದರಲ್ಲೂ ಹೆಚ್ಚು ಜನ ಸೇರುವ ಸ್ಥಳದಲ್ಲಿ ಹಿರಿಯ ನಾಗರಿಕರು ಇರಲೇಬಾರದು. ಇದು ಕಷ್ಟದ ಕೆಲಸವಾದರೂ ಅನಿವಾರ್ಯ. ಸಾಮಾಜಿಕ ಅಂತರ ರೋಗನಿರೋಧಕ ಶಕ್ತಿಯನ್ನು ಕಾಪಾಡುತ್ತದೆ. ಮನೆಯಲ್ಲೇ ಬಿಸಿ ಬಿಸಿಯಾದ ಅಡುಗೆಯನ್ನು ಸೇವಿಸಬೇಕು. ರಾತ್ರ ಲಘು ಅಹಾರ ಉತ್ತಮ.
ತಣ್ಣನೆಯ ಯಾವ ಪದಾರ್ಥವೂ ಬೇಡ. ಕೈ ಕಾಲು ಚೆನ್ನಾಗಿ ತೊಳೆಯಿರಿ. ಇದು ಮುನ್ನಚ್ಚರಿಕೆ ಕ್ರಮಗಳು.
ಗೃಹ ಬಂಧನ ಅಲ್ಲ
ಗೃಹ ನಿರ್ಬಂಧ (ಹೋಂ ಕ್ವಾರಂಟೈನ್) ಎಂಬುದು ಭಾರತಕ್ಕೆ ಕರೊನಾ ರೋಗದಿಂದ ಬಂದಿರುವ ಹೊಸ ವ್ಯವಸ್ಥೆ. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶಗಳಾದ ಚೀನಾ ಮತ್ತು ಭಾರತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದರಲ್ಲಿ ಯಶಸ್ಸಿಯಾಗಬೇಕಾದರೆ ಹಲವು ಬಗೆಯ ಹಾಗೂ ಹಲವು ಹಂತಗಳಲ್ಲಿ ಆಲೋಚಿಸಿ ಕಾರ್ಯನಿರ್ವಹಿಸ
ಬೇಕಾಗುತ್ತದೆ. ನೆಗಡಿ, ಕೆಮ್ಮು , ಜ್ವರ, ಉಸಿರಾಟದ ತೊಂದರೆ ಇದರಲ್ಲಿ ಯಾವುದಾದರೂ ಒಂದು ರೋಗ ಲಕ್ಷಣ ಇದ್ದರೂ ಮನೆಯಿಂದ ಹೊರಗೆ ಹೋಗುವ ಅನಿವಾರ್ಯತೆ ಇಲ್ಲದಿದ್ದಲ್ಲಿ, ಅನ್ಯರಿಗೆ ನಿಮ್ಮಿಂದ ತೊಂದರೆ ಆಗದಂತೆ ಮನೆಯಲ್ಲೇ ಇರುವುದು ಉತ್ತಮ. ಇದನ್ನು ಸೆಲ್ಫ್ ಹೋಂ ಕ್ವಾರಂಟೈನ್ ಅಥವಾ ಸ್ವಯಪ್ರೇರಿತ ಗೃಹ
ನಿರ್ಬಂಧ ಎಂದು ಹೇಳುತ್ತಾರೆ. ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾರಾದರೂ ಕೊರೊನಾ ರೋಗದಿಂದ ಬಳಲುತ್ತಿದ್ದಲ್ಲಿ ಅವರೊಡನೆ ನೀವು ಸಂಪರ್ಕಕ್ಕೆ ಬಂದಿದ್ದಾರೆ, ಆಗ ನಿಮ್ಮನ್ನು ಕಡ್ಡಾಯವಾಗಿ 28 ದಿನಗಳ ಕಾಲ ನಿರ್ಬಂಧಕ್ಕೆ ಒಳಪಡಿಸುವುದು ಸಕರ್ಾರದ ವತಿಯಿಂದ ಇರುವ ಆದೇಶ. ಇಲ್ಲಿ ಭಾರತೀಯರ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಈ ರೋಗ ತಡೆಗಟ್ಟುವಿಕೆಯಲ್ಲಿ ಎಡವುವ ಸಾಧ್ಯತೆಗಳಿವೆ. ಇದು ಗೃಹ ಬಂಧನವಲ್ಲ, ಗೃಹ ನಿರ್ಬಂಧನವಷ್ಟೆ. ರೋಗ ಲಕ್ಷಣಗಳು ಸುಧಾರಿಸಿ ತಪಾಸಣೆಯಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದ ಮೇಲೆ ಮಾತ್ರ ಮನೆಯಿಂದ ಹೊರಬರಬಹುದು.
ಕರೋನಾ ರೋಗಿಗಳು ಆಸ್ಪತ್ರೆಯ ಮೊರೆ ಹೋಗುವುದು ಸಹಜ. ಸಕರ್ಾರ ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಕೆಲವು ಆಸ್ಪತ್ರೆಗಳನ್ನು ಗುರುತಿಸಿ ಕರೋನಾ ರೋಗಿಗಳ ತಪಾಸಣೆ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ. ರೋಗಿಗಳನ್ನು ಮೂರು ವಿಧಗಳಾಗಿ ವಿಂಗಡಿಸಿ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ ಶಿಶ್ರುತನಿರತ ವೈದ್ಯರು ಹಾಗೂ ನಸರ್್ಗಳಿಗೆ ಸೂಕ್ತವಾದ ರಕ್ಷಣಾ ಸಾಮಗ್ರಿಗಳನ್ನು ಒದಗಿಸಿ ಈ ರೋಗವನ್ನು ಹರಡದಂತೆ ಕ್ರಮ ಕೈಗೊಳ್ಳುವುದು ಒಂದು ಸವಾಲೇ ಸರಿ. ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದೇ ರೀತಿ ಇನ್ನೊಬ್ಬ ಮನುಷ್ಯನ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಕ್ಕೆ ನಮಗೆ ಅಧಿಕಾರವಿಲ್ಲ. ಸ್ವಾಥರ್ಿಗಳು ತನ್ನ ಏಳಿಗೆ, ಯಶಸ್ಸನ್ನು ಗಮನದಲ್ಲಿಟ್ಟುಕೊಂಡು ವಸುದೈವ ಕುಟುಂಬಕಂ ಎಂಬ ವಿಶಾಲ ಭಾವನೆಯನ್ನು ಮರೆತು ಇಂಥ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಸೋತಿದ್ದಾನೆ. ಶ್ರೀಮಂತ ಹಾಗೂ ಬಲಿಷ್ಠ, ಅತಿ ಕಡಿಮೆ ಜನಸಂಖ್ಯೆಯುಳ್ಳ ಯುರೋಪ್ ದೇಶಗಳೇ ಈ ರೋಗ ತಡೆಗಟ್ಟುವಲ್ಲಿ ಯಶಸ್ಸು ಕಂಡಿಲ್ಲ. ಅದಕ್ಕೆ ಭಾರತವೂ ಏನೂ ಹೊರತಾಗಿಲ್ಲ.
ಸಾಮಾಜಿಕ ಏಕಾಂತ
ಸಾಮಾಜಿಕವಾಗಿ ಮದುವೆ, ಯರ್ಾಲಿಗಳು ನಡೆಯುತ್ತಿರುತ್ತವೆ. ಶಾಲೆ, ಸಿನಿಮಾ, ಪಾಕರ್್, ಮಾಲ್ ಗಳು ಹಲವು ಸ್ಥಳಗಳಲ್ಲಿ ಜನ ಸೇರುವುದು ಸಹಜ. ಇಲ್ಲಿ ನಿರ್ಬಂಧ ಕೆಲವು ಕಡೆ ಈಗಲೂ ಮುಂದುವರೆದಿದೆ. ಜನರಿಂದ ಜನರಿಗೆ ಸೋಂಕು ಹರಡದಂತೆ ತಡೆಗಟ್ಟಲು ಎಲ್ಲ ಸಕರ್ಾರಗಳು ಮುಂದಾಗಿವೆ. ನಮಸ್ಕರಿಸುವುದು, ಬಿಸಿನೀರಿನಲ್ಲಿ ಸ್ನಾನ, ಸಸ್ಯಹಾರಿ ಯಾಗಿರುವುದು, ಸ್ವಚ್ಛತೆ, ನೈರ್ಮಲ್ಯ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಈಗ ಅನಿವಾರ್ಯ. ಇದನ್ನು ಭಾರತೀಯ ಸಂಸ್ಕೃತಿ ನಿರಂತರವಾಗಿ ಸಾರುತ್ತಲೇ ಬಂದಿದೆ. ಇದರೊಂದಿಗೆ ವಯುಕ್ತಿಕ ರಕ್ಷಣೆ ಬಹಳ ಮುಖ್ಯ. ನಮ್ಮನ್ನು ನಾವು ಕಾಪಾಡಿಕೊಳ್ಳಲು ಇರುವ ರಾಮಬಾಣವೆಂದರೆ ಕೈತೊಳೆಯುವುದು, ಸೋಂಕಿತರಿಂದ ದೂರ ವಿರುವುದು, ರೋಗ ನಿರೋಧಕ ಶಕ್ತಿಯನ್ನು ದೃಢಪಡಿಸಿಕೊಳ್ಳುವುದು, ಶ್ರದ್ಧೆ ನಿಷ್ಠೆಯಿಂದ ನಮ್ಮ ಕರ್ತವ್ಯವನ್ನು ಇತರರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಸಕರ್ಾರದೊಂದಿಗೆ ಸಹಕರಿಸುವುದು. ಕಳೆದ 6 ತಿಂಗಳುಗಳಿಂದ ಆತಂಕದಲ್ಲಿದ್ದೇವೆ. ಕೆಲವು ದಿನಗಳಿಂದ ನಾವು ಏನೂ ಆಗೋಲ್ಲ ಎಂಬ ಭಾವನೆಯಲ್ಲಿದ್ದೇವೆ. ಇದು ಸರಿಯಲ್ಲ. ಈ ರೋಗಕ್ಕೆ ಮದ್ದಿಲ್ಲ. ಅದರಿಂದ ಮೊದಲು ಇದನ್ನು ನಿಯಂತ್ರಿಸಬೇಕು. ಮೊದಲು ಎಲ್ಲರೂ ಮನೆಯಲ್ಲೇ ಇರಬೇಕು. ಸಾಮಾಜಿಕ ಕಾರ್ಯಕ್ರಮಗಳು ಬೇಡ. ಅತಿ ಅಗತ್ಯ ಇದ್ದರೆ ಮಾತ್ರ ಹೊರಗೆ ಹೋಗಬೇಕು. ಸೋಂಕು ಇಲ್ಲ ಎಂದರೆ ಸಂತೋಷ. ಹಾಗೆಂದು ಸುಮ್ಮನೆ ಬೀದಿ, ಮಾರುಕಟ್ಟೆ ಸುತ್ತುವುದು ಬೇಡ. ಅನಿವಾರ್ಯ ಇಲ್ಲ ಎಂದರೆ ಹೊರಗೆ ಹೋಗುವುದು ಬೇಡ. ವೈದ್ಯರು, ಸಕರ್ಾರಿ ನೌಕರರು, ಆಸ್ಪತ್ರೆ ಸಿಬ್ಬಂದಿ, ಮಾಧ್ಯಮ ಮಿತ್ರರು ತಮ್ಮ ಪ್ರಾಣಒತ್ತೆಯಿಟ್ಟು ಅವರಿಗೆ ಕೃತಜ್ಞತೆ ಸಲ್ಲಿಸುವುದು ಅಗತ್ಯ. ಆದರೆ ದಿನನಿತ್ಯವೂ ನಾವು ಆತ್ಮವಿಶ್ವಾಸದಿಂದ ಕೊರೋನಾ ಅನ್ನು ಎದುರಿಸಬೇಕಿಗಿದೆ.
ಆಥರ್ಿಕ ಕ್ಷೇತ್ರದ ಮೇಲೆ ಹೊಡೆತ ಕೊರೊನಾದಿಂದ ಆಥರ್ಿಕರಂಗದ ಮೇಲೆ ಪರಿಣಾಮ ಆಗಲಿದೆ. ಹಣಕಾಸು ಸಚಿವರ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಮಧ್ಯಮವರ್ಗ, ಕೆಳವರ್ಗ, ಮೇಲ್ವರ್ಗ ಸೇರಿದಂತೆ ಎಲ್ಲರಿಗೂ ಕಷ್ಟವಾಗುವುದು ಸಹಜ. ಅದಕ್ಕೆ ಏನು ಕ್ರಮ ಕೈಗೊಳ್ಳಬೇಕೆಂದು ತೀಮರ್ಾನಿಸಿ ಜಾರಿಗೆ ತರಲಾಗುವುದು. ಹೆಮ್ಮಾರಿ ಓಡಿಸಲು ನಿರ್ಬಂಧಗಳ ವಿಸ್ತರಣೆ ಅನಿವಾರ್ಯ. ಕೊರೊನಾ ಎರಡನೇ ಹಂತದಲ್ಲಿದೆ. ಮೂರನೇ ಹಂತ ತಲುಪಿದರೆ ಅಪಾಯ. ಆಗ ಸಮುದಾಯವೇ ವೈರಾಣುವಿಗೆ ಒಳಗಾಗಬಹುದು. ಈ ಹಂತ ತಲುಪದಂತೆ
ಎಚ್ಚರ ವಹಿಸುವುದು ಬಹಳ ಮುಖ್ಯ. ಸಕರ್ಾರ ಈಗ ನಿರ್ಬಂಧವನ್ನು ಮುಂದುವರಿಸಿರುವುದು ಸಕಾಲಿಕ.ಇಂಥ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ.ರಾಜ್ಯದಲ್ಲಿ ಕೊರೊನಾ ವಿರುದ್ಧ ಹೋರಾಟವನ್ನು ಮುಂದುವರೆಸುವ ಅನಿವಾರ್ಯತೆ ಇದೆ.
ದೇಶದಲ್ಲಿ ಈಗ 72 ಪ್ರಯೋಗಾಲಯಗಳು ಕೆಲಸ ಮಾಡುತ್ತಿವೆ. ಇನ್ನೂ 49 ಪ್ರಯೋಗಾಲಯಗಳನ್ನು ಸದ್ಯದಲ್ಲೇ ತೆರೆಯಲಾಗುವುದು. ಅಲ್ಲದೆ ತ್ವರಿತ ಪ್ರಯೋಗಾಲಯಗಳನ್ನು ತೆರೆಯಲಾಗುತ್ತಿದೆ. ಇದರಲ್ಲಿ ಪ್ರತಿದಿನ 1400 ಮಾದರಿಗಳನ್ನು ಪರೀಕ್ಷಿಸಬಹುದು. ಒಟ್ಟು 10 ಲಕ್ಷ ಜನರನ್ನು ಪರೀಕ್ಷಿಸಲು ಬೇಕಾದ ಸಾಮಗ್ರಿಗಳನ್ನು ವಿಶ್ವಆರೋಗ್ಯ ಸಂಸ್ಥೆ ನೀಡುತ್ತಿದೆ. ಸಕರ್ಾರದ ಕ್ರಮ ಕಟ್ಟುನಿಟ್ಟಾಗಿ ಜಾರಿಗೆ ಬರುವುದು ಅಗತ್ಯ. ಹೊಟೇಲ್ ಸೇರಿದಂತೆ ಎಲ್ಲೂ ಕೇಂದ್ರೀಯ ಹವಾ ನಿಯಂತ್ರಣ ಬಳಸಬಾರದು. ಇದರಿಂದ ಸೋಂಕು ಹರಡುವ ಭೀತಿ ಇದೆ. ಖಾಸಗಿ ಸಂಸ್ಥೆಗಳಿಗೆ ಸೇರಿದ ಪ್ರಯೋಗಾಲಯಗಳು ರೋಗ ತಪಾಸಣೆ ನಡೆಸುವ ಕೆಲಸವನ್ನು ಉಚಿತವಾಗಿ ನಡೆಸಿಕೊಟ್ಟರೆ ಉತ್ತಮ ಸಮಾಜಸೇವೆ ಆಗುತ್ತದೆ. ಸೋಂಕಿನ ಶಂಕೆ ಇರುವವರು 14 ದಿನಗಳು ಏಕಾಂಗಿಯಾಗಿ ಕೋಣೆಯಲ್ಲಿರುವುದು ಸೂಕ್ತ. ಇದರಿಂದ ಸೋಂಕನ್ನು ನಿಯಂತ್ರಿಸುವುದು ಸುಲಭವಾಗಲಿದೆ. ಒಂದು ವೇಳೆ ಸೋಂಕು ಬಂದವರಲ್ಲಿ
ಶ್ರೀಮಂತರಿದ್ದರೆ ಅವರು ಪಂಚತಾರಾ ಹೊಟೇಲುಗಳಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿದ್ದು ಚಿಕಿತ್ಸೆ ಪಡೆಯಬಹುದು. ಆದರೆ ವಯಸ್ಸಾದವರು ಮಾತ್ರ ಜಾಗರೂಕತೆಯಿಂದ ಇರಬೇಕಾದ ಅನಿವಾರ್ಯತೆ ಇದೆ.

Share This Article
Leave a comment