ನವಜಾತ ಹೆಣ್ಣು ಶಿಶು ಸಾವನ್ನಪ್ಪಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಘೋಷಿಸಿದ ನಂತರ ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ. ಈ ವೇಳೆ ಮಗು ಉಸಿರಾಡುತ್ತಿರುವುದನ್ನು ಸಂಬಂಧಿಕರು ಗಮನಿಸಿಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ರಾಯಚೂರು ಜಿಲ್ಲೆಯ ತುರುವಿಹಾಳ ಗ್ರಾಮದಿಂದ ತಡವಾಗಿ ವರದಿಯಾಗಿದೆ
ಮೇ 10 ರಂದು ತುರುವಿಹಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಈರಪ್ಪ ಮತ್ತು ಅಮರಮ್ಮ ದಂಪತಿಗೆ ಹೆಣ್ಣು ಮಗುವಾಗಿತ್ತು. ಆದರೆ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇತ್ತು. ಹೀಗಾಗಿ ಮಗುವನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೋಷಕರಿಗೆ ಸೂಚಿಸಿದ್ದಾರೆ.
ಇದನ್ನು ಓದಿ : ಕೇರಳದಲ್ಲಿ ಭಾರೀ ಮಳೆ : 14 ವರ್ಷಗಳ ನಂತರ ಮೇ ನಲ್ಲೂ KRS ನಲ್ಲಿ 100 ಅಡಿ ನೀರು
ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಯ ವೈದ್ಯರು ಮಗುವನ್ನು ದಾಖಲಿಸಿಕೊಂಡು ಮೂರ್ನಾಲ್ಕು ದಿನ ಚಿಕಿತ್ಸೆ ನೀಡಿದ್ದಾರೆ. ಇಲ್ಲಿ ಚಿಕಿತ್ಸೆಗಾಗಿ ದಿನಕ್ಕೆ 10 ದಿಂದ 12 ಸಾವಿರ ರು ಹಣ ತೆಗೆದುಕೊಂಡಿದ್ದಾರೆ. ಆದರೂ, ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದರು.
ಮಗು ಮೃತಪಟ್ಟಿರುವ ವಿಷಯ ತಿಳಿದ ಪೋಷಕರು ತುರುವಿಹಾಳ ಗ್ರಾಮಕ್ಕೆ ಮೇ 14ರಂದು ಕರೆದೊಯ್ದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿತ್ತು. ಇದೇ ವೇಳೆ ಸ್ಮಶಾನದಲ್ಲಿ ಮಗು ಉಸಿರಾಡುತ್ತಿರುವುದನ್ನು ಗಮನಿಸಿದ ಸಂಬಂಧಿಕರೊಬ್ಬರು ಕೂಡಲೇ ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಮಗು ಚಿಕಿತ್ಸೆ ಪಡೆಯುತ್ತಿದೆ.
ಇದೀಗ ಪೋಷಕರು ನವಜಾತ ಶಿಶು ಸಾವನ್ನಪ್ಪಿದೆ ಎಂದು ಘೋಷಿಸಿದ ಖಾಸಗಿ ಆಸ್ಪತ್ರೆಯ ವೈದ್ಯರ ವಿರುದ್ಧ ಪೋಷಕರು ಮತ್ತು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಚಂದ್ರಶೇಖರ ಗುರೂಜಿ ಮೂಲ ಬಾಗಲಕೋಟೆ, ವಾಸ ಮುಂಬೈ – ಸಾವಿರಾರು ಕೋಟಿ ಒಡೆಯನ ಅಂತ್ಯಕ್ರಿಯೆ ಇಂದು
- ಬೆಂಗಳೂರು ನಗರ ಮಾಜಿ DC ಮಂಜುನಾಥ್ ಫ್ಲ್ಯಾಟ್ ಮೇಲೆ ACB ದಾಳಿ: 30 ಎಕರೆ ಜಮೀನು ದಾಖಲೆ ಪತ್ತೆ
- ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ
- ಅಗ್ನಿಪಥ್ ನೇಮಕಾತಿ ಅಗ್ನಿವೀರರ ನೌಕಾಪಡೆಯಲ್ಲಿ ಶೇ.20ರಷ್ಟು ಹುದ್ದೆ ಮಹಿಳೆಯರಿಗೆ ಮೀಸಲು
- 40 ಸೆಕೆಂಡಿನಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಆಸ್ತಿಗಾಗಿ ಗುರೂಜಿ ಕೊಲೆ: ವನಜಾಕ್ಷಿ ಬಂಧನ
More Stories
ಬೆಂಗಳೂರು ನಗರ ಮಾಜಿ DC ಮಂಜುನಾಥ್ ಫ್ಲ್ಯಾಟ್ ಮೇಲೆ ACB ದಾಳಿ: 30 ಎಕರೆ ಜಮೀನು ದಾಖಲೆ ಪತ್ತೆ
ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ
40 ಸೆಕೆಂಡಿನಲ್ಲಿ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಆಸ್ತಿಗಾಗಿ ಗುರೂಜಿ ಕೊಲೆ: ವನಜಾಕ್ಷಿ ಬಂಧನ