December 22, 2024

Newsnap Kannada

The World at your finger tips!

salu 1

ಕರ್ನಾಟಕ ಕೇಂದ್ರಿಯ ವಿ.ವಿ ಘಟಿಕೋತ್ಸವ: ಸಾಲುಮರದ ತಿಮ್ಮಕ್ಕನಿಗೆ ಡಾಕ್ಟರೇಟ್ ಪದವಿ

Spread the love

ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವ ಸೆಂ.23 ಬುಧವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ವಿಶ್ವವಿದ್ಯಾಲಯದ ಅನುದಾನ ಆಯೋಗ ಅಧ್ಯಕ್ಷ ಪ್ರೊ.ಡಿ.ಪಿ.ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳುತ್ತಿದ್ದಾರೆ. ಕಾರ್ಯ ಕ್ರಮವು ಆನ್ ಲೈನ್ ಮೂಲಕ ನಡೆಯಲಿದೆ. ವರ್ಚುವಲ್ ರೀತಿಯಲ್ಲಿ ನಡೆಯುತ್ತದೆ ಎಂದು ವಿವಿ ಕುಲಪತಿ ಎಚ್.ಎಂ .ಮಹೇಶ್ವರಯ್ಯ ತಿಳಿಸಿದ್ದಾರೆ.

ಐವರಿಗೆ ಗೌರವ ಡಾಕ್ಟರೇಟ್

ಈ ವಿಶ್ವವಿದ್ಯಾಲಯವು 5ನೇ ಘಟಿಕೋತ್ಸವದ ಅಂಗವಾಗಿ ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸಾಲು ಮರದ ತಿಮ್ಮಕ್ಕ, ಜಾನಪದ ಲೇಖಕ ಮತ್ತು ಬರಹಗಾರ ಎಂ.ಬಿರಾದಾರ್, ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್. ಬೈರಪ್ಪ, ಕವಿ ಧಾರವಾಡದ ಚನ್ನವೀರ ಕಣವಿ ,ಬಾಹ್ಯಕಾಶ ವಿಜ್ಞಾನಿ ಕೆ. ಶಿವನ್ ಸೇರಿದಂತೆ ಐವರಿಗೆ ಡಾಕ್ಟರೇಟ್ ಕೊಡುವುದಾಗಿ ತಿಳಿಸಿದೆ.

ಅಲ್ಲದೆ 38 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 28 ವಿದ್ಯಾರ್ಥಿಗಳಿಗೆ ಪಿ ಎಚ್ ಡಿ 665 ಅರ್ಹ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!