ಮಂಡ್ಯ: ಸಹೋದರಿಯ ಮನೆಗೆ ಭೇಟಿ ನೀಡಿದ ಬಳಿಕ ವೈದ್ಯರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮದ್ದೂರಿನ ಕುದುರಗುಂಡಿಯಲ್ಲಿ ನಿನ್ನೆ ಜರುಗಿದೆ
ಡಾ.ವೇಣುಗೋಪಾಲ್ (57) ಆತ್ಮಹತ್ಯೆ ಮಾಡಿಕೊಂಡವರು ಮಂಡ್ಯದ ಸಾಂಜೋ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದರು.
ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಡಾ. ವೇಣುಗೋಪಾಲ್ ನಿನ್ನೆ ಕೂಡ ಹಲವು ರೋಗಿಗಳಿಗೆ ಚಿಕಿತ್ಸೆ ನೀಡಿ, ಮೈಸೂರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದರು.
ಆದರೆ ಮೈಸೂರಿಗೆ ಹೋಗದೆ ಮದ್ದೂರು ತಾಲೂಕಿನ ಕುದುರಗುಂಡಿ ಬಳಿ ಕೆರೆಯ ಸಮೀಪ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋದರಿ ಸಾವಿನಿಂದ ಕುಗ್ಗಿದ್ದರು ಡಾ. ವೇಣುಗೋಪಾಲ್ ಅವರಿಗೆ ಬೇರೆ ಏನಾದರೂ ಆರೋಗ್ಯ ಸಮಸ್ಯೆಯಿತ್ತಾ ಎಂಬುದು ಗೊತ್ತಾಗಿಲ್ಲ. ಆದರೆ ಮಾನಸಿಕವಾಗಿ ತುಂಬ ಬಳಲಿದ್ದರು.
ಕಳೆದ ವರ್ಷ ಇವರ ತಂಗಿ ಗಾಯತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆಗಿನಿಂದಲೂ ಡಾ. ವೇಣುಗೋಪಾಲ್ ದುಃಖದಲ್ಲೇ ಇದ್ದು, ಖಿನ್ನತೆಗೆ ಒಳಗಾಗಿದ್ದರು. ಮೂರು ದಿನಗಳ ಹಿಂದೆ ತಂಗಿ ಗಾಯತ್ರಿಯ ವರ್ಷದ ತಿಥಿಯಿತ್ತು.
ಅಂದು ವೇಣುಗೋಪಾಲ್ ಅವರು ತಮ್ಮ ಸೋದರಿಯ ಸಮಾಧಿ ಪಕ್ಕ ಕುಳಿತು ಅತ್ತಿದ್ದರು. ನಿನ್ನೆ ಆಸ್ಪತ್ರೆಯಿಂದ ನೇರವಾಗಿ ಮೈಸೂರಿಗೆ ಹೋಗುವ ಮೊದಲು ಕುದುರುಗುಂಡಿಯಲ್ಲಿರುವ ತಂಗಿ ಮನೆಗೆ ಹೋಗಿದ್ದರು.ಜಿಎಸ್ ಟಿ ಸಂಗ್ರಹ : ರಾಜ್ಯಕ್ಕೆ ಎರಡನೇ ಸ್ಥಾನ – ಸಿ. ಶಿಖಾ
ಆ ಮನೆಯಿಂದ ಹೊರಬಿದ್ದವರು ಸಮೀಪದ ಕೆರೆಯ ಬಳಿ ಹೋಗಿ, ಅಲ್ಲೇ ಗದ್ದೆಯಲ್ಲಿ ನೇಣುಬಿಗಿದುಕೊಂಡಿದ್ದಾರೆ. ಇವರ ಶವ ಪರೀಕ್ಷೆ ನಡೆಸಲಾಗುತ್ತಿದೆ. ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು