February 21, 2026

Newsnap Kannada

The World at your finger tips!

ayran girl

ಶಾರುಖ್ ಪುತ್ರ ಆರ್ಯನ್ ಜೊತೆ ಇದ್ದ ಯುವತಿ ಯಾರು ಗೊತ್ತಾ?

Spread the love

ಕಡಲ ಮಧ್ಯೆ ಹಡಗಿನಲ್ಲೇ ರೇವ್ ಪಾರ್ಟಿ ನಡೆಸುತ್ತಿದ್ದ ಶಾರೂಖ್‌ ಖಾನ್‌ ಪುತ್ರ ಸೇರಿ 8 ಮಂದಿಯನ್ನು ಎನ್‌ಸಿಬಿ ಬಂಧಿಸುತ್ತಿದ್ದಂತೆಯೇ ಆ ಉಳಿದ 7 ಮಂದಿ ಯಾರು ಎಂಬ ಕುತೂಹಲ ನಡುವೆ ಒಬ್ಬೊಬ್ಬರದ್ದೇ ವಿವರ ಬಹಿರಂಗವಾಗುತ್ತಿದೆ.

ಶಾರೂಖ್‌ ಪುತ್ರ ಆರ್ಯನ್‌ ಖಾನ್‌ ಜೊತೆ ಬಂಧಿತ ಯುವತಿಯ ಹೆಸರು ಮುನ್‌ಮುನ್‌ ಧಮೇಚಾ ಎಂದು ಗೊತ್ತಾಗಿದೆ.

ಆರ್ಯನ್‌ ಗೆಳೆಯ ಅರ್ಬಾಜ್‌ ಸೇಥ್‌ ಮರ್ಚಂಟ್‌ ಕೂಡಾ ಇವರ ಜೊತೆಗಿದ್ದ ಎನ್ನಲಾಗಿದೆ.

ಯಾರೀಕೆ ಮುನ್‌ಮುನ್‌ ಧಮೇಚಾ?:

39 ವರ್ಷದ ಮುನ್‌ಮುನ್‌ ಫ್ಯಾಶನ್‌ ಮಾಡೆಲ್ ಹಾಗೂ ಆಕೆ ಉದ್ಯಮಿ ಕುಟುಂಬಕ್ಕೆ ಸೇರಿದವಳು. ಆಕೆ ಮೂಲತಃ ಮಧ್ಯಪ್ರದೇಶದವಳು. ಇಲ್ಲಿನ ಸಾಗರ್‌ ಜಿಲ್ಲೆಯ ತೆಹ್ಸೀಲ್‌ ನಿವಾಸಿ. ಆದರೆ ಈಗ ಆಕೆಯ ಕುಟುಂಬದ ಯಾರು ಕೂಡಾ ಮಧ್ಯಪ್ರದೇಶದಲ್ಲಿಲ್ಲ. ಮುನ್‌ಮುನ್‌ ಶಾಲೆಯ ಓದೆಲ್ಲಾ ಆಗಿದ್ದು ಸಾಗರ್‌ ಜಿಲ್ಲೆಯಲ್ಲೇ.

ಕೋವಿಡ್‌ನಿಂದ ಸಾವನ್ನಪ್ಪಿದ್ದ ಅಮ್ಮ:

ಕಳೆದ ವರ್ಷ ಕೋವಿಡ್‌ನಿಂದಾಗಿ ಮುನ್‌ಮುನ್‌ ತಾಯಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಆಕೆಯ ಅಪ್ಪ ಸಾವನ್ನಪ್ಪಿದ್ದರು. ಶಾಲಾ ವಿದ್ಯಾಭ್ಯಾಸ ಸಾಗರ್‌ ಜಿಲ್ಲೆಯಲ್ಲೇ ಆಗಿದ್ದರೂ ಆಕೆಯ ಬಗ್ಗೆ ಅಲ್ಲಿನವರಿಗೆ ಯಾವುದೇ ಮಾಹಿತಿ ಇಲ್ಲ. ಸಾಗರ್‌ ಜಿಲ್ಲೆಯಲ್ಲೇ ಆಕೆಯ ಪೋಷಕರು ವಾಸವಾಗಿದ್ದ ಮೂರಂತಸ್ತಿನ ಮನೆಯಿದೆ. ಸದ್ಯ ಅಲ್ಲಿ ಯಾರೂ ವಾಸವಾಗಿಲ್ಲ. 8 ವರ್ಷ ಹಿಂದೆಯೇ ಆಕೆ ಸಾಗರ್‌ ಜಿಲ್ಲೆಯಿಂದ ದೆಹಲಿಗೆ ತೆರಳಿದ್ದಳು. ಸದ್ಯ ಆಕೆ ತನ್ನ ಸೋದರ ಅಮಿತ್‌ ಧಮೇಚಾ ಜೊತೆ ದೆಹಲಿಯಲ್ಲಿ ವಾಸವಾಗಿದ್ದಾಳೆ.

error: Content is protected !!