January 13, 2025

Newsnap Kannada

The World at your finger tips!

ramesh kangana

ಬಟ್ಟೆ ಬಿಚ್ಚಿ ಓಡಾಡೋರಿಗೆ ಗಾಂಧಿ ಮೌಲ್ಯದ ಬಗ್ಗೆ ಗೊತ್ತಾ? ಕಂಗನಾಗೆ ತಿವಿದ ರಮೇಶ್​ ಕುಮಾರ್​

Spread the love

ಗಾಂಧೀಜಿ ಅವರ ಅಹಿಂಸಾ ಮಾರ್ಗದ ಕುರಿತು ಇತ್ತೀಚಿಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಗರಂ ಆಗಿ ‘ಹೊಟ್ಟೆ ಪಾಡಿಗಾಗಿ ಬಟ್ಟೆ ಬಿಚ್ಚಿ ಓಡಾಡೋರಿಗೆ ಗಾಂಧಿ ಮೌಲ್ಯ ಅಂದ್ರೆ ಏನು ಗೊತ್ತು’ ಎಂದು ತಾವೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ಸ್ವಾತಂತ್ರ್ಯ ಸಂಭ್ರಮದ ಏಳುವರೆ ದಶಕದ ವರ್ಷಾಚರಣೆ ಹಿನ್ನೆಲೆ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ರಮೇಶ್ ಕುಮಾರ್ , ಬ್ರಿಟಿಷ್​ರ ವಾರಸ್ದಾರರಾಗಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್​ ಎಂದಿದ್ದಾರೆ.

ಹಿಂದೂ ರಾಷ್ಟ್ರದ ಕನಸಿಗಾಗಿ ಸಿಎಎ ತಂದು ಗಲಭೆ ಸೃಷ್ಟಿಸುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ನೆಹರು ಅವರು ಸ್ಥಾಪಿಸಿದರೆ ಅದೇ ಉದ್ಯಮಗಳನ್ನು ಅವರು ಖಾಸಗಿಕರಣಗೊಳಿಸಿದರು. ಇದೇ ನಮಗೂ ನಿಮಗೂ ಇರುವ ವ್ಯತ್ಯಾಸ ಎಂದು ರಮೇಶ್​ ಕುಮಾರ್​ ಗುಡುಗಿದರು.

ಗಾಂಧಿ ಬಗ್ಗೆ ಮಾತನಾಡಿರುವ ನಟಿಯ ವಿರುದ್ಧ  ಖಂಡಿಸಬೇಕೆಂದು ರೇವಣ್ಣ ಚೀಟಿ ಕೊಟ್ಟು ಹೇಳಿದ್ರು. ಅಂತವರ ಬಗ್ಗೆ ಈ ವೇದಿಕೆಯಲ್ಲಿ ಮಾತನಾಡಿದರೆ ಅವರು ದೊಡ್ಡವರಾಗುತ್ತಾರೆ. ಹೊಟ್ಟೆ ಪಾಡಿಗಾಗಿ ಬಟ್ಟೆ ಬಿಚ್ಚಿ ಓಡಾಡೋರಿಗೆ ಗಾಂಧಿ ಮೌಲ್ಯ ಅಂದ್ರೆ ಏನು ಗೊತ್ತು ಬಿಡಿ’ ಎಂದು ರಮೇಶ್​ ಕುಮಾರ್​ ಟಾಂಗ್​ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!