December 27, 2024

Newsnap Kannada

The World at your finger tips!

dks m

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ

Spread the love

ಸೆಲ್ಫಿ ತೆಗೆದುಕೊಳ್ಳಲು ಹೋದ ಅಭಿಮಾನಿಯ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಗರಂ ಆದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಬಳಿ‌ ನಡೆದಿದೆ.

137ನೇ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆ ಹಿನ್ನೆಲೆ ಧ್ವಜಾರೋಹಣ ಮಾಡಲು ಶಿವಪುರ ಸತ್ಯಾಗ್ರಹ ಸೌಧಕ್ಕೆ ಡಿ.ಕೆ.ಶಿವಕುಮಾರ್​ ಆಗಮಿಸಿದ್ದರು.

ನಾಯಕನನ್ನು ನೋಡಲು ವೇಳೆ ಅಭಿಮಾನಿಯೊಬ್ಬ ಅಧ್ಯಕ್ಷ ಶಿವಕುಮಾರ್​ ಹಿಂದಿನಿಂದ ಬಂದು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಕೆಂಡಾಮಂಡಲವಾದ ಡಿಕೆಎಸ್​ ಅಭಿಮಾನಿಯ ಮೊಬೈಲ್​ ಕಿತ್ತುಕೊಂಡು ಕಾಮನ್​ಸೆನ್ಸ್​ ಇಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಡಿಕೆಎಸ್​ ಅವರಿಗೆ ಹಾರ ಹಾಕಿ ಸ್ವಾಗತಿಸಲು ಆಗಮಿಸಿದ ಬೇರೆ ಕಾರ್ಯಕರ್ತರು ಅವರು ಸಿಡಿಮಿಡಿಗೊಂಡಿದ್ದನ್ನು ಕಂಡು ಹಾರ ಹಾಕಲು ಹಿಂದೇಟು ಹಾಕಿದ್ದಾರೆ.

ಸದ್ಯ ಡಿ.ಕೆ.ಶಿವಕುಮಾರ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!