ನಿಖಿಲ್ ಕುಮಾರಸ್ವಾಮಿಗೆ ಸಮಾಧಾನ ಹೇಳಿದ ಡಿಕೆಶಿ

Team Newsnap
0 Min Read

ರಾಮನಗರ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ನಿಖಿಲ್ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಫೋನ್ ಕರೆ ಮಾಡಿ ಸಮಾಧಾನ ಹೇಳಿದ್ದಾರೆ.

ಎರಡು ಚುನಾವಣೆಗಳಲ್ಲಿ ಸೋತಿದ್ದೀಯಾ, ನಿನಗೆ ರಾಜಕೀಯ ಕುಟುಂಬದ ಹಿನ್ನೆಲೆ ಇದೆ. ಈ ಸೋಲಿನಿಂದ ಕಂಗೆಡಬೇಡ. ಕ್ಷೇತ್ರದಲ್ಲಿ ಓಡಾಡು, ಜನರೊಂದಿಗೆ ಇರು, ಭವಿಷ್ಯದಲ್ಲಿ ಉತ್ತಮ ಅವಕಾಶಗಳಿವೆ,” ಎಂದಿದ್ದಾರೆ.

ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಹೋದರೂ ಈ ಮಟ್ಟಕ್ಕೆ ಬೆಳೆದಿದ್ದೇನೆ. ಆದರೆ ನೀನು ಎರಡು ಸೋಲಿನಿಂದ ಹತಾಶನಾಗಬೇಡ, ರಾಜಕೀಯದಲ್ಲಿ ಏಳು-ಬೀಳು ಸಹಜ. ನಿನಗೆ ರಾಜಕೀಯದಲ್ಲಿ ಭವಿಷ್ಯವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Share This Article
Leave a comment