ಡಿಕೆಶಿ ಮನೆಯಲ್ಲಿ 50 ಲಕ್ಷ ರು ವಶ – ಸಿಬಿಐ ಬಂಧಿಸುವ ಸಾಧ್ಯತೆ

Team Newsnap
1 Min Read
Notice from Election Commission to D.K. - Provide document for allegation ಚುನಾವಣಾ ಆಯೋಗದಿಂದ ಡಿ.ಕೆ.ಶಿಗೆ ನೋಟಿಸ್ - ಆರೋಪಕ್ಕೆ ದಾಖಲೆ ಕೊಡಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ಇಂದು ಬೆಳಿಗ್ಗೆ ದಾಳಿ ನಡೆಸಿದ ಸಿಬಿಐ 50 ಲಕ್ಷ ರು ಗಳನ್ನು ವಶಪಡಿಸಿಕೊಂಡಿದೆ.

60 ಜನ ಸಿಬಿಐ ಅಧಿಕಾರಿಗಳು, ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸ, ಕನಕಪುರ, ದೆಹಲಿ‌ ಹೀಗೆ 14 ಭಾಗಗಳಲ್ಲಿ‌ ದಾಳಿ‌ ನಡೆಸಿದ್ದರು. ದಾಳಿ ನಡೆಸಿದ ವೇಳೆಯಲ್ಲಿ‌ 50 ಲಕ್ಷವನ್ನು ವಶ ಮಾಡಿಕೊಳ್ಳಲಾಗಿದೆ ಎಂದು ಎಎನ್‌ಐ ಹೇಳಿದೆ.

ವಶಪಡಿಸಿಕೊಂಡಿರುವ ಹಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನೆಗೆ ಸಿಬಿಐ ಮುಂದಾಗಿದೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುಣಾವಣೆಯ ಪ್ರಯುಕ್ತ ಈ ಹಣವನ್ನು ಶೇಖರಿಸಲಾಗಿತ್ತೆ? ಎಂಬ ಪ್ರಶ್ನೆಗಳು ಈಗ ಹರಿದಾಡುತ್ತಿವೆ.

ಹೆಚ್ಚಿನ ವಿಚಾರಣೆಗಾಗಿ ಡಿಕೆಶಿ ಅವರನ್ನು ಬಂಧಿಸುವ ಸಾಧ್ಯತೆಯಿದೆ. ಹಾಗಾಗಿ ಡಿಕೆಸಿ‌ ನಿವಾಸ ಮತ್ತು ಸಿಬಿಐ ಕಛೇರಿ ಸುತ್ತಮುತ್ತ ಭಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಡಿಕೆಶಿ ಪರ ವಕೀಲರು ‘ದಾಳಿಗೆ ಹೈಕೋರ್ಟ್ ತಡೆ ನೀಡಿದ್ದರೂ ಸಿಬಿಐ ದಾಳಿ‌ ನಡೆಸಿದೆ‘ ಎಂದು ಆರೋಪಿಸಿದ್ದಾರೆ.

TAGGED:
Share This Article
Leave a comment