ಮನೆಯಲ್ಲಿ ಅನಾಹುತ ಮಾಡಿಕೊಂಡ ಡಿ.ಕೆ.ಶಿ: ​​ ಬಲಗೈಗೆ ಪೆಟ್ಟು

Team Newsnap
1 Min Read
DK Shi accident at home: Injured right hand ಮನೆಯಲ್ಲಿ ಅನಾಹುತ ಮಾಡಿಕೊಂಡ ಡಿ.ಕೆ.ಶಿ: ​​ ಬಲಗೈಗೆ ಪೆಟ್ಟು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳೆದ ರಾತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುವ ವೇಳೆ ಅನಾಹುತ ಒಂದನ್ನು ಮಾಡಿಕೊಂಡಿದ್ದಾರೆ.  ತಮ್ಮ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ.

ನಿನ್ನೆ ಇ.ಡಿ ವಿಚಾರಣೆಗೆ ಹಾಜರಾಗಿ ವಾಪಸ್ ಬಂದ ಬಳಿಕ ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಓದಿ –ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವ ಬೆದರಿಕೆ – ಸಾಪ್ಟ್ ವೇರ್ ಇಂಜಿನಿಯರ್ ಬಂಧನ

ಈ ವೇಳೆ ಮೇಲೆ ಏಳುವಾಗ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಕೈಕೊಟ್ಟು ಮೇಲೆ ಏಳುವ ಸಂದರ್ಭದಲ್ಲಿ ಗಾಯಮಾಡಿಕೊಂಡಿದ್ದಾರೆ.

ವೈದ್ಯರ ತಪಾಸಣೆ ವೇಳೆ ಸಣ್ಣ ಕ್ರ್ಯಾಕ್ ಬಂದ ಹಿನ್ನೆಲೆಯಲ್ಲಿ ಕೈಗೆ ಬ್ಯಾಂಡೇಜ್ ಹಾಕಿದ್ದಾರೆ. ಭರದಿಂದ ಸಾಗ್ತಿರೋ ಭಾರತ್ ಜೋಡೋ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಭಾಗಿಯಾಗಲ್ಲ ಅನ್ನೋ ಅನುಮಾನ ಕಾಡಿತ್ತು.

ಆದ್ರೆ, ಕೈ ಫ್ಯಾಕ್ಚರ್ ನಡುವೆಯೂ ಡಿಕೆ ಶಿವಕುಮಾರ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು

Share This Article
Leave a comment