ಚುನಾವಣೆಯ ವೇಳೆ ಇಡಿ, ಸಿಬಿಐ ನಿಂದ ಡಿಕೆಶಿ, ಪುತ್ರಿ ಐಶ್ವರ್ಯಗೆ ಶಾಕ್

Team Newsnap
1 Min Read
DK, daughter Aishwarya shocked by ED, CBI during election ಚುನಾವಣೆಯ ವೇಳೆ ಇಡಿ, ಸಿಬಿಐ ನಿಂದ ಡಿಕೆಶಿ, ಪುತ್ರಿ ಐಶ್ವರ್ಯಗೆ ಶಾಕ್

ಪ್ರಜಾಧ್ವನಿ ಯಾತ್ರೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಇಡಿ ಹಾಗೂ ಸಿಬಿಐ ಅಧಿಕಾರಿಗಳು ಮತ್ತೆ ಬಿಗ್ ಶಾಕ್ ನೀಡಿದ್ದಾರೆ.

ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಿಬಿಐ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಐಶ್ವರ್ಯ ಪಾವತಿಸಿದ್ದ ಶುಲ್ಕದ ಬಗ್ಗೆ ಮಾಹಿತಿ ಸಿಬಿಐ ಮಾಹಿತಿ ಕೇಳಿದೆ.

ನನ್ನ ಮಗಳು ಐಶ್ವರ್ಯಾಗೆ ಸಿಬಿಐನವರು ನೋಟಿಸ್ ನೀಡಿದ್ದಾರೆ. ಕಾಲೇಜು ಶುಲ್ಕ ಕಟ್ಟಿದ್ದೆಲ್ಲವನ್ನೂ ಕೇಳುತ್ತಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.ಲಂಚ ಸ್ವೀಕಾರ : ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ

ಇನ್ನೊಂದೆಡೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.27 ರ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಡಿಕೆಶಿಗೆ ಸಮನ್ಸ್ ನೀಡಿದ್ದಾರೆ.

ದೆಹಲಿಯ ಇಡಿ ಕಚೇರಿಯಲ್ಲಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಚುನಾವಣಾ ಹೊತ್ತಿನಲ್ಲಿ ಇದು ಡಿಕೆಶಿಗೆ ಬಿಗ್ ಶಾಕ್ ಎನ್ನಲಾಗಿದೆ.

Share This Article
Leave a comment