ಅಮೃತ ಮಹೋತ್ಸವ ಯೋಜನೆ ಜಾರಿಗೆ ಜಿಲ್ಲಾ ಸಚಿವರ ನೇಮಕ: ಪಟ್ಟಿ ಪ್ರಕಟ

Team Newsnap
1 Min Read

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಘೋಷಿಸಲಾಗಿರುವ ಅಮೃತ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ಫಲಾನುಭವಿಗಳ ಆಯ್ಕೆಗಾಗಿ ನಡೆಯುವ ಸಭೆಯ ಅಧ್ಯಕ್ಷತೆ ವಹಿಸಲು ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನದ ಉಸ್ತುವಾರಿ ವಹಿಸಲಾಗಿದೆ.

ಯಾವ ಸಚಿವರು, ಯಾವ ಜಿಲ್ಲೆ?

  • ಆರ್.ಅಶೋಕ್- ಬೆಂಗಳೂರು ನಗರ
  • ಬಿ. ಶ್ರೀರಾಮುಲು- ಚಿತ್ರದುರ್ಗ
  • ವಿ.ಸೋಮಣ್ಣ- ರಾಯಚೂರು
  • ಉಮೇಶ್ ವಿ.ಕತ್ತಿ- ಬಾಗಲಕೋಟೆ
  • ಎಸ್.ಅಂಗಾರ- ದಕ್ಷಿಣ ಕನ್ನಡ
  • ಗೋವಿಂದ ಎಂ.ಕಾರಜೋಳ – ಬೆಳಗಾವಿ
  • ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
  • ಜೆ.ಸಿ.ಮಾಧುಸ್ವಾಮಿ- ತುಮಕೂರು
  • ಆರಗ ಜ್ಞಾನೇಂದ್ರ- ಚಿಕ್ಕಮಗಳೂರು
  • ಡಾ: ಸಿ.ಎನ್.ಅಶ್ವತ್ಥ್ ನಾರಾಯಣ- ರಾಮನಗರ
  • ಸಿ.ಸಿ.ಪಾಟೀಲ್- ಗದಗ
  • ಆನಂದ್ ಸಿಂಗ್ – ಬಳ್ಳಾರಿ ಮತ್ತು ವಿಜಯನಗರ
  • ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
  • ಪ್ರಭು ಬಿ.ಚೌಹಾಣ್- ಬೀದರ್
  • ಮುರುಗೇಶ್ ನಿರಾಣಿ- ಕಲಬುರಗಿ
  • ಅರಬೈಲ್ ಶಿವರಾಮ್ ಹೆಬ್ಬಾರ್- ಉತ್ತರ ಕನ್ನಡ
  • ಎಸ್.ಟಿ.ಸೋಮಶೇಖರ್- ಮೈಸೂರು ಮತ್ತು ಚಾಮರಾಜನಗರ
  • ಬಿ.ಸಿ.ಪಾಟೀಲ್- ಹಾವೇರಿ
  • ಬಿ.ಎ.ಬಸವರಾಜ್- ದಾವಣಗೆರೆ
  • ಡಾ: ಕೆ.ಸುಧಾಕರ್- ಚಿಕ್ಕಬಳ್ಳಾಪುರ
  • ಕೆ.ಗೋಪಾಲಯ್ಯ- ಹಾಸನ
  • ಶಶಿಕಲಾ ಜೊಲ್ಲೆ- ವಿಜಯಪುರ
  • ಎಂ.ಟಿ.ಬಿ.ನಾಗರಾಜು- ಬೆಂಗಳೂರು ಗ್ರಾಮಾಂತರ
  • ಡಾ: ಕೆ.ಸಿ.ನಾರಾಯಣಗೌಡ- ಮಂಡ್ಯ
  • ಬಿ.ಸಿ.ನಾಗೇಶ್- ಯಾದಗಿರಿ
  • ವಿ.ಸುನೀಲ್ ಕುಮಾರ್- ಉಡುಪಿ
  • ಆಚಾರ್ ಹಾಲಪ್ಪ ಬಸಪ್ಪ- ಕೊಪ್ಪಳ
  • ಶಂಕರ.ಬಿ.ಪಾಟೀಲ್ ಮುನೇನಕೊಪ್ಪ- ಧಾರವಾಡ
  • ಮುನಿರತ್ನ- ಕೋಲಾರ

ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗಾಗಿ ರಾಜ್ಯ ಸರ್ಕಾರ ಅಮೃತ ಮಹೋತ್ಸವ ಯೋಜನೆ ಜಾರಿಗೆ ತಂದಿದೆ. ಈ ಅಂಗವಾಗಿ 14 ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿ 644.5 ಕೋಟಿ ರು ಅನುದಾನವನ್ನು ಮೀಸಲಿಡಲಾಗಿದೆ.

Share This Article
Leave a comment