January 5, 2026

Newsnap Kannada

The World at your finger tips!

dharmastala

ಮಂಡ್ಯದಲ್ಲಿ ಬಡ ಕುಟುಂಬಗಳಿಗೆ ಧರ್ಮಸ್ಥಳ ಸಂಸ್ಥೆ ಯಿಂದ ಆಹಾರ ಕಿಟ್ ವಿತರಣೆ

Spread the love

ಮಂಡ್ಯ ತಾಲೂಕಿನ ಮಹದೇಶ್ವರ ಬಡಾವಣೆಯ ಬಡಕುಟುಂಬದ ಸದಸ್ಯರಿಗೆ ಧರ್ಮಸ್ಥಳ ಸಂಸ್ಥೆ ವತಿಯಿಂದ ಆಹಾರ ಕಿಟ್ ಹಾಗೂ ಆರೋಗ್ಯ ರಕ್ಷ ಕಾರ್ಡನ್ನು ಕೌನ್ಸಿಲರ್ ಮೀನಾಕ್ಷಿ ರವರು ವಿತರಿಸಿದರು.

ಈ ವೇಳೆ ಮಾತನಾಡಿದ ನಗರ ಸಭಾ ಸದಸ್ಯೆ ಮೀನಾಕ್ಷಿ ರವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಕೊರೋನ ಸಂದರ್ಭದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡುತ್ತಿದೆ.‌ ಬಡ ಕುಟುಂಬದ ಸದಸ್ಯರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿರುವುದು ತುಂಬಾ ಉತ್ತಮವಾದ ಕಾರ್ಯಕ್ರಮವಾಗಿದೆ. ಆಹಾರದ ಕಿಟ್ ಅನ್ನು ಒಳ್ಳೆ ರೀತಿಯಲ್ಲಿ ಬಳಕೆ ಮಾಡಿಕೊಳ್ಳಿ ಹಾಗೂ ಕೊರೋನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಿ ಮಾಸ್ಕ್ ಧರಿಸಿಕೊಳ್ಳಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಕೋರಿದರು.

ನಂತರ ಮಂಡ್ಯ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ರವರು ಮಾತನಾಡಿ ಮಂಡ್ಯ ತಾಲೂಕಿನಲ್ಲಿ ನಿರ್ಗತಿಕರ ಕುಟುಂಬಗಳಿಗೆ ಮಾಸಾಶನವನ್ನು ನೀಡುತ್ತಿದ್ದೇವೆ 17 ಕುಟುಂಬಗಳಿಗೆ 20000 ಮಾಸಾಶನವನ್ನು ವಿತರಣೆ ಮಾಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ತಾಲೂಕಿನ ಯೋಜನಾಧಿಕಾರಿ ಮಮತಾ ಶೆಟ್ಟಿ MIS ಯೋಜನಾಧಿಕಾರಿ ರಾಘವೇಂದ್ರ ಕೃಷಿ ಮೇಲ್ವಿಚಾರಕ ನವೀನ್ ಕುಮಾರ್ ಇದ್ದರು.

error: Content is protected !!