ಮೈಶುಗರ್ ಸಕ್ಕರೆ ಕಾರ್ಖಾನೆಯ 4 ನೇ ವೇಜ್ ಬೋಡ್೯ ಅರಿಯರ್ಸ್ ವಿತರಣೆ

Team Newsnap
2 Min Read

ಮೈಶುಗರ್ ಸಕ್ಕರೆ ಕಾರ್ಖಾನೆಯ 4 ನೇ ವೇಜ್ ಬೋಡ್೯ ಅರಿಯರ್ಸ್ ಚೆಕ್ ನ್ನು‌ ಜಿಲ್ಲಾಧಿಕಾರಿ ಡಾ: ಹೆಚ್ ಎನ್ ಗೋಪಾಲಕೃಷ್ಣ ಅವರು ಇಂದು ಸಕ್ಕರೆ ಕಾರ್ಖಾನೆ ಆವರಣದಲ್ಲಿ ವಿತರಿಸಿದರು.

ಕಾರ್ಮಿಕರ ಹಿತದೃಷ್ಟಿಯಿಂದ ನಾವು ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಹಾರ ನಡೆಸಿ ಎರಡು ಮೂರು ವರ್ಷದಿಂದ ಗೋದಾಮುನಲ್ಲಿ ಇರೋ ಸಕ್ಕರೆ ಎನ್ನೆಲ್ಲಾ ಒಟ್ಟಿಗೆ ನಾವು ಮಾರಾಟ ಮಾಡಿ ಬಂದಂತಹ 8 ಕೋಟಿ ಹಣವನ್ನ ನಿವೃತ್ತಿ ನೌಕರರ ಪಿಂಚಣಿ, ಮೆಡಿಕಲ್ ಹಣಕ್ಕೆ ನಾವೂ ವಿನಿಯೋಗ ಮಾಡಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಮಾತನಾಡಿ ಕಾರ್ಮಿಕರು ಕಾರ್ಖಾನೆಯ ಜೀವಾಳ, ಮೈಶುಗರ್ ಕಾರ್ಖಾನೆ ಮಂಡ್ಯ ಜಿಲ್ಲೆಯ ಹೆಮ್ಮೆ ಕಾರ್ಮಿಕರು ಹಾಗೂ ರೈತಾಪಿ ವರ್ಗದವರು ಮೈಶುಗರ್ ಕಾರ್ಖಾನೆಯ ಕಾರ್ಯನಿರ್ವಾಹಣೆಗಾಗಿ ಶ್ರಮಿಸಬೇಕು.

4 ನೇ ವೇತನ ಮಂಡಳಿಯ ಸುಮಾರು 1127 ನೌಕರರಿಗೆ ಬಾಕಿ ವೇತನ ಪಾವತಿ ಮಾಡಲು ಕ್ರಮ ವಹಿಸಲಾಗಿದೆ. 6.14 ಕೋಟಿ ಹಣದಲ್ಲಿ 2.94 ಕೋಟಿ ಹಣ ವಿತರಣೆ ಮಾಡಲು ಅನುಮತಿ ದೊರೆತಿದೆ. ಇಂದು ಸಾಂಕೇತಿಕವಾಗಿ 15 ಜನಕ್ಕೆ ಚೆಕ್ ವಿತರಣೆ ಮಾಡಿದ್ದೇವೆ. ಉಳಿದಂತೆ ಎಲ್ಲಾ ಕಾರ್ಮಿಕರಿಗೆ 4 ನೇ ವೇತನದ ಬಾಕಿಯು ಆರ್.ಟಿ.ಜಿ.ಎಸ್ ಮೂಲಕ ಅವರ ಬ್ಯಾಂಕ್ ಖಾತೆ ಜಮೆ ಮಾಡಲಾಗುವುದು.

ಮಂಡ್ಯ ರೈತರು ಕಬ್ಬು ಕಡಿಯುವ ಸಂಸ್ಕೃತಿಯನ್ನು ಬೆಳಿಸಿಕೊಳ್ಳಬೇಕು. ಇದರಿಂದ ಬೇರೆ ಜಿಲ್ಲೆಯ ಕಾರ್ಮಿಕರ ಮೇಲೆ ಅವಲಂಬಿತರಾಗುವುದು ತಪ್ಪುತ್ತದೆ. ಇದರಿಂದ ಹಣದ ಉಳಿತಾಯ ಸಹ ಆಗುತ್ತದೆ ಎಂದರು.

ಮೈಶುಗರ್ ಕಾರ್ಖಾನೆಯ ವ್ಯವಸ್ಥಾಪಕರ ನಿರ್ದೇಶಕ ಅಪ್ಪಸಾಹೇಬ್ ಪಾಟೀಲ್ ಮಾತನಾಡಿ 4ನೇ ವೇತನ ಮಂಡಳಿಯ ಹಣ ಜಾರಿಯಾಗುವುದಕ್ಕೆ ಕಾರ್ಮಿಕರ ಸಂಘಟನೆಯ ಹೋರಾಟ ಕಾರಣ, ಅದಕ್ಕಾಗಿ ಅವರಿಗೆ ನನ್ನ ಧನ್ಯವಾದಗಳು ಎಂದರು.

ರೈತರಿಗೆ ಹಾಗೂ ಕಬ್ಬು ಕಟಾವು ಮಾಡಿದವರಿಗೆ ಯಾವುದೇ ರೀತಿಯ ಹಣ ಕಾರ್ಖಾನೆಯಿಂದ ಬಾಕಿ ಉಳಿಸಿಕೊಂಡಿಲ್ಲ.

ಮಂಡ್ಯ ಜಿಲ್ಲೆ ಸಕ್ಕರೆ ನಾಡು ಎಂಬ ಹೆಸರನ್ನು ಅಳಿಸಲು ಯಾವ ಜಿಲ್ಲೆಗೂ ಆಗಿಲ್ಲ. ಅದಕ್ಕೆ ಈ ಭಾಗದ ರೈತಾಪಿ ವರ್ಗ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಮೈಶುಗರ್ ಕಾರ್ಖಾನೆಯ ವೆಂಕಟೇಶ್, ಕಾರ್ಖಾನೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಹಾಜರಿದ್ದರು.

Share This Article
Leave a comment