ರಾಹುಲ್ ಅನರ್ಹತೆ ವಾಪಸ್ : ಸ್ಪೀಕರ್ ಓಂ ಬಿರ್ಲಾ ಆದೇಶ- ರಾಗಾ ಈಗ ಮತ್ತೆ ಸಂಸದ

Team Newsnap
1 Min Read

ನವದೆಹಲಿ :

ಸಂಸದ ಹುದ್ದೆಯಿಂದ ಅನರ್ಹ ಗೊಂಡಿದ್ದ ರಾಹುಲ್ ಗಾಂಧಿಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ವಾಪಸ್ ಸಂಸದ ಹುದ್ದೆ ನೀಡಿದ್ದಾರೆ.

ಆನರ್ಹತೆ ಆದೇಶ ಹಿಂದಕ್ಕೆ ಪಡೆದ ಕಾರಣಕ್ಕಾಗಿ ಮತ್ತೆ ರಾಹುಲ್ ಗಾಂಧಿ ಸಂಸದರಾಗಿ ಲೋಕಸಭೆ ಎಂಟ್ರಿ ಪಡೆದಿದ್ದಾರೆ.ಈ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಎಂಪಿಯಾಗಿ ಮುಂದುವರೆಯಲಿದ್ದಾರೆ.

ಮೋದಿ’ ಉಪನಾಮ ಹೇಳಿಕೆ ಪ್ರಕರಣದಲ್ಲಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಆಗಸ್ಟ್ 4) ತಡೆಯಾಜ್ಞೆ ನೀಡಿದ ನಂತರ ವಯನಾಡ್ ಸಂಸದ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಲೋಕಸಭಾ ಸಚಿವಾಲಯ ಪುನಃ ಸ್ಥಾಪಿಸಿದೆ.

ಮಾರ್ಚ್ 2023 ರಲ್ಲಿ ಅವರನ್ನು ಕೆಳಮನೆಯಿಂದ ಅನರ್ಹಗೊಳಿಸಲಾಗಿತ್ತು.

Share This Article
Leave a comment