January 30, 2026

Newsnap Kannada

The World at your finger tips!

disha bagavath

ಕುಮಟಾದ ದಿಶಾ ಭಾಗವತ್ ಕ್ಯಾಲಿಫೋರ್ನಿಯಾ ಬಾರ್‌ ಕೌನ್ಸಿಲ್‌ ನಲ್ಲಿ ಅಟರ್ನಿಯಾಗಿ ನೇಮಕ‌

Spread the love

ಅಮೇರಿಕಾದ ಕ್ಯಾಲಿಫೋರ್ನಿಯಾ ಬಾರ್‌ ಕೌನ್ಸಿಲ್‌ನಲ್ಲಿ ಅಟರ್ನಿಯಾಗಿ
ಕುಮಟಾ ತಾಲೂಕು ಕಡೇಕೋಡಿಯ ಯುವತಿ ದಿಶಾ ಭಾಗವತ್ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರಿನ ಉದ್ಯಮಿ, ದಿಶಾ ಎಂಟರ್‌ ಪ್ರೈಸೆಸ್‌ ಮಾಲೀಕ ಮಂಜುನಾಥ ಭಾಗವತ್‌, ಲಲಿತಾ ಭಾಗವತ್‌ ದಂಪತಿಗಳ ಪುತ್ರಿ ದಿಶಾ.‌

ಬೆಂಗಳೂರಿನಲ್ಲಿ ಕ್ರೈಸ್ಟ್‌ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪೂರ್ಣಗೊಳಿಸಿದ ದಿಶಾ, ಅಮೆರಿಕಾದಲ್ಲಿ ಯುಎಸ್‌ಸಿ ಮಾಸ್ಟರ್‌ ಡಿಗ್ರಿ ಪಡೆದಿದ್ದರು.

ಕ್ಯಾಲಿಫೋರ್ನಿಯಾ ಬಾರ್‌ ಕೌನ್ಸಿಲ್‌ ನಡೆಸುವ ಕಠಿಣ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಅಟರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಮೇರಿಕಾದಲ್ಲಿ ಈ ಮೊದಲು ಸಿಟಿ ಅಟರ್ನಿ ಕಚೇರಿಯಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿರುವ ಇವರು ಕರಾಟೆಯಲ್ಲಿ ಬ್ಲಾಕ್‌ ಬೆಲ್ಟ್ ಪಡೆದಿದ್ದಾರೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಗಾರ ಪದಕ ವಿಜೇತರಾಗಿದ್ದಾರೆ. ಇವರು ಈಚೆಗಷ್ಟೇ ಮಿಸ್‌ ಕರ್ನಾಟಕ ವಿಜೇತರಾಗಿರುವ ಭಾವನಾ ಭಾಗವತ್‌ ಸಹೋದರಿ.

error: Content is protected !!