ಬಿಜೆಪಿಯಲ್ಲಿ ಶಿಸ್ತು ಹಾಳಾಗಿದೆ : ವಲಸಿಗರ ವಿರುದ್ಧ ಈಶ್ವರಪ್ಪ ಗುಡುಗು

Team Newsnap
1 Min Read

ಹುಬ್ಬಳ್ಳಿ : ಈಗ ಬಿಜೆಪಿಯಲ್ಲಿ ಶಿಸ್ತು ಹೋಗಿದೆ. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬಂದಿದೆ. ವಲಸಿಗರಿಂದ ಬಿಜೆಪಿ ಹಾಳಾಗುತ್ತಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕೆಂಡಾಮಂಡಲವಾದರು.

ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ ಕಾಂಗ್ರೆಸ್‌ನಿಂದ ವಲಸೆ ಬಂದವರಿಂದ ಪಕ್ಷ ಶಿಸ್ತು ದಿಕ್ಕಾಪಾಲಾಗಿದೆ, ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ನಾವು ಈಗ ಅನುಭವಿಸುತ್ತಿದ್ದೇವೆ ಎಂದರು.

ಕಾಂಗ್ರೆಸ್ ನಾಯಕರು ಬಂದ ಮೇಲೆ ಅಲ್ಪ ಸ್ವಲ್ಪ ಅಶಿಸ್ತು ಬಂದಿದ್ದು ನಿಜ. ಆಪರೇಷನ್ ಕಮಲವೇ ಬಿಜೆಪಿ ಸೋಲಿಗೆ ಮುಳುವಾಯ್ತು. ಮುಂದೆ ನಮ್ಮ ನಾಯಕರು ಬಾಲ ಕಟ್ ಮಾಡ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.ಚೆಕ್ ಬೌನ್ಸ್ ಪ್ರಕರಣ : ಜಾಲಪ್ಪ ಪುತ್ರನಿಗೆ ಜೈಲು

ಹೊಂದಾಣಿಕೆ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಬಹಿರಂಗವಾಗಿ ಹೊಂದಾಣಿಕೆ ರಾಜಕಾರಣದ ಎನ್ನುವುದರ ಬಗ್ಗೆ ಚರ್ಚೆ ಆಗುತ್ತಿರುವುದು ದುರ್ದೈವ. ಬಹಿರಂಗವಾಗಿ ಯಾರು ಕೂಡಾ ಈ ರೀತಿ ಮಾತನಾಡಬಾರದು. ಇದು 4 ಗೋಡೆಗಳ ಮಧ್ಯೆ ನಡೆಯಬೇಕಾದ ಚರ್ಚೆ ಎಂದು ಹೇಳಿದರು.

Share This Article
Leave a comment