ಕೊರೊನಾ ಭೀಕರತೆಗೆ ಹೆದರಿದ ದಂಪತಿಗಳು ಪೋಲಿಸ್ ಕಮಿಷನರ್ ಗೆ ಫೋನ್ ಮೂಲಕ ಮಾಹಿತಿ ನೀಡಿ ನಂತರ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ಜರುಗಿದೆ
ಬೈಕಂಪಾಡಿಯ ರಹೇಜ ಅಪಾರ್ಟ್‌ಮೆಂಟ್ ನಲ್ಲಿ ನಡೆದ ಈ ಘಟನೆಯಲ್ಲಿ ಆರ್ಯ ಸುವರ್ಣ ಮತ್ತು ಗುಣ ಸುವರ್ಣ ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು.
ತಾವು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಪೋಲಿಸ್ ಕಮಿಷನರ್ ಗೆ ಕರೆ ಮಾಡಿ ತಮ್ಮ ಆತ್ಮಹತ್ಯೆ ಗೆ ಕಾರಣ ನೀಡಿದ್ದಾರೆ.
ನಮಗೆ ಮಕ್ಕಳಿಲ್ಲ. ಷುಗರ್ ಜಾಸ್ತಿ ಇದೆ. ಎರಡು ಬಾರಿ ಮಕ್ಕಳಾದರೂ ಅವು ಬದುಕಲಿಲ್ಲ. ಇದೇ ಕೊರಗಿನಿಂದ ನಮಗೆ ಕೊರೊನಾ ಬಂದಿದೆ. ಟಿವಿಯಲ್ಲಿ ಕೊರೊನಾ ಭೀಕರತೆಯ ಸುದ್ದಿ ನೋಡಿ ಭಯವಾಗಿದೆ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.
ನಮ್ಮ ಅಂತ್ಯ ಸಂಸ್ಕಾರ ಮತ್ತು ತಿಥಿ ಕಾರ್ಯಕ್ಕೆ ಒಂದು ಲಕ್ಷ ಬಳಸಿಕೊಂಡು ಮನೆಯಲ್ಲಿರುವ ವಸ್ತುಗಳನ್ನು ಬಡವರಿಗೆ ಹಂಚಿ ಎಂದು ಪೋಲಿಸ್ ಕಮಿಷನರ್ ಗೆ ಮನವಿ ಮಾಡಿದ್ದಾರೆ.
ಈ ವಿಷಯ ತಿಳಿದ ಪೋಲಿಸ್ ಕಮಿಷನರ್ ಪೋಲಿಸ್ ಸಿಬ್ಬಂದಿಗಳನ್ನು ಶೀಘ್ರವಾಗಿ ಕಳುಹಿಸಿದರೂ ಅಷ್ಟರಲ್ಲಿ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದರು.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ