ಡ್ರಗ್ಸ್ ದಂಧೆ, ಹವಾಲ ತನಿಖೆಗೆ ಜಾರಿ ನಿರ್ದೇಶನಾಲಯ

Team Newsnap
1 Min Read

ನ್ಯೂಸ್ ಸ್ನ್ಯಾಪ್.

ಬೆಂಗಳೂರು.

ಇಡೀ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕವನ್ನೇ ದಂಗು ಬಡಿಸಿದ್ದ ಡ್ರಗ್ಸ್ ದಂಧೆಯ ತನಿಖೆಯನ್ನು ಜಾರಿ ನಿರ್ದೇಶನಾಲಯವು ಕೈಗೆತ್ತಿಕೊಂಡಿದೆ. ಗುರುವಾರ ಸಿಸಿಬಿ‌ ಕಛೇರಿಗೆ ಭೇಟಿ‌ ನೀಡಿ ಬಂಧಿತ ಆರೋಪಿ ವೀರೇನ್ ಖನ್ನಾ ವ್ಯವಹಾರದ ಬಗೆಗಿನ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ವಿದೇಶಿಗರ ಜೊತೆ ಸಂಪರ್ಕ ಹೊಂದಿರುವ, ಖನ್ನಾ ಡ್ರಗ್ಸ್ ನ್ನ ತರಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಡ್ರಗ್ಸ್ ಸಾಗಾಣಿಕೆಗೆ ಸಂಬಂಧಿಸಿದಂತೆ ಹವಾಲ, ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಅನುಮಾನ‌ ಪಡಲಾಗಿತ್ತು.

ಸಿಸಿಬಿ ಕೇಂದ್ರಕ್ಕೆ ಭೇಟಿ ನೀಡಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸಿಸಿಬಿಯ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ವೀರೇನ್ ಖನ್ನಾ, ರಾಗಿಣಿ ಮತ್ತು ಸಂಜನಾ ಅವರ ಬಗ್ಗೆ ವಿಚಾರಿಸಿ, ಪ್ರಕರಣ ದಾಖಲಿಸಲು ಬೇಕಾದ ಎಲ್ಲ ವಿವರಗಳನ್ನು ಕಲೆಹಾಕಿದ್ದಾರೆ ಎಂದು ಗೊತ್ತಾಗಿದೆ.

Share This Article
Leave a comment