2021 ರ ವೇಳೆಗೆ ಡಿಜಿಟಲ್ ವೋಟರ್ ಐಡಿ – ಕೇಂದ್ರ ಚುನಾವಣಾ ಆಯೋಗ ಸಿದ್ದತೆ

Team Newsnap
1 Min Read

ಕೇಂದ್ರ ಚುನಾವಣಾ ಆಯೋಗವು 2021 ವೇಳೆಗೆ ಮತದಾರರಿಗೆ ಡಿಜಿಟಲ್ ವೋಟರ್ ಐಡಿ ನೀಡಲು ಸಿದ್ಧತೆ ನಡೆಸಿದೆ. ಇದು ಆಧಾರ್ ಕಾರ್ಡ್ ಮಾದರಿಯಲ್ಲಿ ಗುರುತಿ ಚೀಟಿ ಇರುತ್ತದೆ.

2021 ರಲ್ಲಿ ನಡೆಯುವ 5 ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮುನ್ನವೇ ಚುನಾವಣಾ ಆಯೋಗವು ಡಿಜಿಟಲ್ ವೋಟರ್ ಐಡಿ ಕಾರ್ಡ್ ವಿತರಿಸಲು ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದೆ.

ಕೇಂದ್ರ ಚುನಾವಣಾ ಆಯೋಗ ಈ ಕುರಿತಂತೆ ಪ್ರಸ್ತಾವನೆಯನ್ನು ಸಿದ್ಧ ಮಾಡಿದೆ. ಆಧಾರ್ ಕಾರ್ಡ್ ಮಾದರಿಯಲ್ಲೇ ಎಲ್ಲ ಮತದಾರರಿಗೂ ಡಿಜಿಟಲ್ ವೋಟರ್ ಐಡಿ ಕಾರ್ಡ್ ನೀಡಲು ಯೋಜನೆ ರೂಪಿಸಿದೆ.

ಹಳೆಯ ಮತದಾರರು ದಾಖಲೆ ನೀಡಿ, ಡಿಜಿಟಲೀಕರಣ ಮಾಡಿಕೊಳ್ಳಬೇಕು. ಕಾರ್ಡ್ ನಲ್ಲಿ 2 ಕ್ಯೂಆರ್ ಕೋಡ್ ಇರಲಿದೆ, ಮತದಾರನ ಹೆಸರು ಹಾಗೂ ಮಾಹಿತಿ ಇರಲಿದೆ.

Share This Article
Leave a comment