December 25, 2024

Newsnap Kannada

The World at your finger tips!

Ef2C7rAUEAAvThu

ಆಕರ್ಷಣೆ ಕಳೆದುಕೊಳ್ಳದ ದೇವಾರಾಜ್ ಅರಸರ ಕಪ್ಪುಕಾರು !

Spread the love

ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಬಳಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಪ್ಪುಕಾರು ಇಂದಿಗೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ.

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಈ ಕಾರನ್ನು ವಿದೇಶದಿಂದ ತರಿಸಿ ಅರಸು ಸರ್ಕಾರಕ್ಕೆ ಕೊಡುಗೆಯಾಗಿ ನೀಡಿದ್ದರು.

೧೯೭೨ರ ಚುನಾವಣೆಯಲ್ಲಿ ದೇವರಾಜ ಅರಸು ಭಾರಿ ಗೆಲುವು ಸಾಧಿಸಿದ್ದರು. ಇದರಿಂದ ಸಂತಸಗೊಂಡು ಇಂದಿರಾ ಗಾಂಧಿ ಈ ದೊಡ್ಡ ಉಡುಗೊರೆ ನೀಡಿದ್ದರು.

ಮುಖ್ಯಮಂತ್ರಿಯಾಗಿ ಸೇವೆಸಲ್ಲಿಸಿದ ಅವಧಿಯಲ್ಲಿ ಅರಸು ಎಂಇಒ 777 ನೋಂದಣಿಯ ಈ ಕಾರನ್ನೇ ಬಳಸಿದ್ದರು.

10 ವರ್ಷಗಳ ಕಾಲ ಅರಸು ಬಳಸಿದ್ದ ಈ ಕಾರನ್ನು ಹರಾಜಿನಲ್ಲಿ ಅವರ ಆಪ್ತ ಕಾರ್ಯದರ್ಶಿ ಜಿ.ಎಂ. ಬಾಬು ಖರೀದಿಸಿ ಜೋಪಾನವಾಗಿ ನೋಡಿಕೊಳ್ಳುತ್ತಿದ್ದಾರೆ.

ವಿಶೇಷವೆಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಖುಷಿಗಾಗಿ ಇದೇ ಕಾರಿನಲ್ಲಿ ವಿಧಾನಸೌಧ ಒಂದು ಸುತ್ತು ಹಾಕಿದ್ದರು.

ದೇವರಾಜ ಅರಸರ 106 ಜನ್ಮದಿನಾಚರಣೆ ಪ್ರಯುಕ್ತ ಇಂದು ಈ ಮರ್ಸಿಡಿಸ್ ಬೆಂಜ್ ಕಾರು ವಿಧಾನ ಸೌಧ ಪ್ರವೇಶಿಸಿದ್ದು ವಿಶೇಷವಾಗಿತ್ತು

Copyright © All rights reserved Newsnap | Newsever by AF themes.
error: Content is protected !!