November 23, 2024

Newsnap Kannada

The World at your finger tips!

HD devegowda

ನೈಸ್ ಸಂಸ್ಥೆಗೆ 2 ಕೋಟಿ ರು ಪರಿಹಾರ ನೀಡುವಂತೆ ದೇವೇಗೌಡರಿಗೆ ಕೋರ್ಟ್ ಆದೇಶ

Spread the love

ನೈಸ್​​ ಸಂಸ್ಥೆ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡರು ಎರಡು ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಲು ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿದೆ.

ದೇವೇಗೌಡರ ವಿರುದ್ಧ 27 ಜೂನ್, 2012 ರಲ್ಲಿ‌ ಮಾನನಷ್ಟ ಮೊಕದ್ದಮೆ ಕೇಸ್​ ಹಾಕಲಾಗಿತ್ತು. 8 ವರ್ಷ, 11 ತಿಂಗಳು, 20 ದಿನಗಳ ನಂತರ ಈ ಆದೇಶ ಹೊರಬಿದ್ದಿದೆ.

ಸಂದರ್ಶನ ಒಂದರಲ್ಲಿ ದೇವೇಗೌಡರು, ನೈಸ್​ ಸಂಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ಮಾತನಾಡಿದ್ದರು ಅಂತ ಆರೋಪಿಸಲಾಗಿತ್ತು. ಈ ಸಂಬಂಧ ದೇವೇಗೌಡರ ವಿರುದ್ಧ ನೈಸ್​ ಸಂಸ್ಥೆ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಅರ್ಜಿಯಲ್ಲಿ 10 ಕೋಟಿ ರೂಪಾಯಿ ಪರಿಹಾರವನ್ನ ಸಂಸ್ಥೆ ಕೇಳಿತ್ತು.

ಇದೀಗ ಕೋರ್ಟ್​ನಲ್ಲಿ ಸಂಸ್ಥೆ ವಿರುದ್ಧ ಆರೋಪ ಸಾಬೀತುಪಡಿಸುವಲ್ಲಿ ದೇವೇಗೌಡರು ವಿಫಲರಾಗಿದ್ದಾರೆ. ಈ ಸಂಬಂಧ ನೈಸ್​ ಸಂಸ್ಥೆಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಇನ್ಮುಂದೆ ಯಾವುದೇ ಮಾನಹಾನಿ ಹೇಳಿಕೆ ನೀಡಬಾರದು ಅಂತಾ ಸಿಟಿ ಸಿವಿಲ್ ಕೋರ್ಟ್​ನ ನ್ಯಾ. ಮಲ್ಲನಗೌಡ ಆದೇಶ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!