ಮಾಜಿ ಪ್ರಧಾನಿಗಳು, ರೈತ ನಾಯಕರು ಎಂಬ ಭಾವನೆಯಿಂದ ಎಚ್.ಡಿ.ದೇವೇಗೌಡರನ್ನು ಮುಖ್ಕಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ ವಿನಃ ಜನತಾ ದಳ(ಎಸ್) ನಾಯಕರು ಅಂತ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ಲೇಸಿ, ಭೇಟಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ
ಹಾಸನದ ಶಾಸಕ ಪ್ರೀತಂಗೌಡರಿಗೆ ಈ ಭೇಟಿಯ ಉದ್ದೇಶವನ್ನು
ಮನವರಿಕೆ ಮಾಡಿಸಲಾಗುವುದು ಎಂದರು.
ದೇವೇಗೌಡ್ರು, ರೇವಣ್ಣ, ಎಚ್.ಡಿ. ಕುಮಾರಸ್ವಾಮಿಯವರ ಮುಂದೆ ಹಾಸನ ಜಿಲ್ಲೆಯಲ್ಲಿ ಶಕ್ತಿಮೀರಿ ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ ಪ್ರೀತಂಗೌಡ ಶಾಸಕರಾಗಿದ್ದಾರೆ. ತಮ್ಮ ಜಿಲ್ಲೆಯಲ್ಲಿ ಸಂಘಟನೆಯನ್ನು ಕಟ್ಟಬೇಕು ಎಂಬ ಪ್ರಯತ್ನ ಶಾಸಕರದ್ದಾಗಿದೆ. ಇಂತಹ ವೇಳೆ ಮುಖ್ಯಮಂತ್ರಿಗಳು ದೇವೇಗೌಡರನ್ನು ಭೇಟಿ ಮಾಡಿದ್ದು ಸಮಾಧಾನ ತಂದಿಲ್ಲವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ರಾಜ ಕಾರಣಕ್ಕೆ, ಬಿಜೆಪಿ ಚಟುವಟಿಕೆಗೆ ಅಲ್ಲಿ(ಹಾಸನಜಿಲ್ಲೆ) ತೊಂದರೆಯಾಗುವುದಿಲ್ಲ ಎಂಬ ಮನವರಿಕೆಯನ್ನು ಮಾಡಿಕೊಡುತ್ತೇವೆ ಎಂದು ಹೇಳಿದರು.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ