May 21, 2022

Newsnap Kannada

The World at your finger tips!

WhatsApp Image 2022 01 30 at 12.26.31 PM

ಸಿಎಂ ನಿವಾಸದ ಬಳಿ ಚಾಕ್ಲೇಟ್​ ಕವರ್​ನಲ್ಲಿ ಗಾಂಜಾ ಮಾರಾಟ ವ್ಯಕ್ತಿಯ ಬಂಧನ

Spread the love

ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಆರ್​.ಟಿ.ನಗರದ ನಿವಾಸದ ಬಳಿ ಬೀಡಾ ಅಂಗಡಿಯಲ್ಲಿ ಗಾಂಜಾ ಮಾರಾಟದ ಆರೋಪ ವ್ಯಕ್ತಿಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶದ ಮೂಲದ ವ್ಯಕ್ತಿಯೋರ್ವ ಸಿಎಂ ನಿವಾಸದ ಸ್ವಲ್ಪ ದೂರದಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದ.

ಅಲ್ಲಿ ಚಾಕ್ಲೇಟ್​ ಕವರ್​ನಲ್ಲಿ ಗಾಂಜಾ ಗುಳಿಗೆಯನ್ನು ಮಾರಾಟ ಮಾಡ್ತಿದ್ದ ಎಂದು ಆರೋಪಿಸಲಾಗಿದೆ.

ಚಾಕ್ಲೇಟ್​ ಕವರ್​ನಲ್ಲಿ ಗಾಂಜಾ ಗುಳಿಗೆ ಸುತ್ತಿ ಪ್ರತಿ ಒಂದು ಚಾಕ್ಲೇಟ್​ಗೆ 50 ರಿಂದ 100 ರೂಪಾಯಿವರಗೆ ಆರೋಪಿ ಮಾರಾಟ ಮಾಡ್ತಿದ್ದ ಎನ್ನಲಾಗಿದೆ.

ಆರೋಪಿ ಗಾಂಜಾ ಗುಳಿಗೆಗಳನ್ನು ಉತ್ತರ ಪ್ರದೇಶದಿಂದ ತಂದು ‘ಸಾಯ್’​ ಹೆಸರಿನ ಚಾಕ್ಲೇಟ್​ ಕವರ್​ನಲ್ಲಿ ಇಟ್ಟು ಮಾರುತ್ತಿದ್ದನೆಂದು ಹೇಳಲಾಗಿದೆ . ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿರುವ ಪೊಲೀಸರು, 5ಕೆಜಿ ಗಾಂಜಾ ಗುಳಿಗೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

error: Content is protected !!