ಇ-ಕಾಮರ್ಸ್ ಪೋರ್ಟಲ್ ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಹೋಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ 34 ಸಾವಿರ ರು ಮೋಸ ಹೋಗಿದ್ದಾರೆ.
ಹರ್ಷಿತಾಗೆ ವೆಬ್ ಪೋರ್ಟಲ್ ನಲ್ಲಿ ವ್ಯಕ್ತಿಯೊಬ್ಬ ಸೋಫಾ ಖರೀದಿ ಮಾಡುವುದಾಗಿ ಹೇಳಿ ಸಂಪರ್ಕಿಸಿ ದ್ದಾನೆ.
ನಂತರ ರೇಟ್ ಫಿಕ್ಸ್ ಆದ ಮೇಲೆ ವ್ಯಕ್ತಿ ಹರ್ಷಿತಾಳ ಖಾತೆಗೆ ಸ್ವಲ್ಪ ಹಣ ಹಾಕಿದ್ದಾನೆ. ಅದನ್ನು ತಿಳಿದುಕೊಳ್ಳಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ಹರ್ಷಿತಾಳಿಗೆ ಹೇಳಿದ್ದಾನೆ.
ಆತನ ಮಾತಿನಂತೆ ಹರ್ಷಿತಾ ಕ್ಯೂರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಮೊದಲಿಗೆ 20 ಸಾವಿರ ರುಪಾಯಿ ಖಾತೆಯಿಂದ ಕಡಿತವಾಗಿದೆ. ಇದನ್ನು ತಿಳಿದುಕೊಳ್ಳಲು ಹರ್ಷಿತಾ ಮತ್ತೆ ಆತನನ್ನು ಪ್ರಶ್ನಿಸಿದ್ದಾಳೆ.
ಆಗ ಆತ ತಪ್ಪು ಬಾರ್ ಕೋಡ್ ಕಳಿಸಿದ್ದೇನೆ ಮತ್ತೊಂದು ಬಾರ್ ಕೋಡ್ ಕಳಿಸಿ ಇದನ್ನು ಸ್ಕ್ಯಾನ್ ಮಾಡಿ ಸರಿ ಹೋಗುತ್ತದೆ ಎಂದು ಹೇಳಿದ್ದಾಳೆ.
ಮತ್ತೆ 14 ಸಾವಿರ ರುಪಾಯಿ ಕಳೆದುಕೊಂಡ ನಂತರ ಹರ್ಷಿತಾಳಿಗೆ ತಾನು ಮೋಸ ಹೋಗಿರುವುದಾಗಿ ಗೊತ್ತಾಗಿ ಸಿವಿಲನ್ ಲೈನ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
ಸಂಕ್ರಾಂತಿ ಬಳಿಕ ಬಸ್ ಟಿಕೆಟ್ ದರ ಏರಿಕೆ ಸಾಧ್ಯತೆ
ಹೊಸ ವರ್ಷದ ಸಂಭ್ರಮ: KSBCLನಿಂದ ಒಂದೇ ದಿನ 308 ಕೋಟಿ ರೂ. ಮದ್ಯ ಮಾರಾಟ