ಜಮ್ಮು-ಕಾಶ್ಮೀರ್‌ನ ಶೋಪಿಯಾನ ಜಿಲ್ಲೆಯ ಜೈನಪೋರಾ ಪ್ರದೇಶದ ಸುಗಾನ್ ಗ್ರಾಮದಲ್ಲಿ ಮಂಗಳವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಘರ್ಷಣೆ ನಡೆದ ಘರ್ಷಣೆಯಲ್ಲಿ ಇಬ್ಬರು ಉಗ್ರರು ಹತ್ಯೆ ಮಾಡಲಾಗಿದೆ.
ಜೈನಪೋರಾ ಪ್ರದೇಶದ ಸುಗಾನ್ ಗ್ರಾಮದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಯ ಸಿಬ್ಬಂದಿ ಅವರನ್ನು ಶೋಧಿಸಿ ಬಂಧಿಸಲು ಹೋಗಿದ್ದರು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿ ದಾಳಿ ಮಾಡಿದ್ದಾರೆ. ಪ್ರತಿದಾಳಿ ಮಾಡಿದ ಭದ್ರತಾ ಪಡೆಯವರು ಇಬ್ಬರು ಉಗ್ರರನ್ನು ಕೊಂದಿದ್ದಾರೆ.
ಘಟನೆಯ ಬಗ್ಗೆ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ಕಾಶ್ಮೀರದ ಪೋಲೀಸರು ‘ಉಗ್ರರ ದಾಳಿಗೆ ಪ್ರತಿಯಾಗಿ ಮಾಡಿದ ದಾಳಿಯು ಎನ್‌ಕೌಂಟರ್ ಆಗಿ ಮಾರ್ಪಟ್ಟಿದೆ. ಹತರಾದ ಉಗ್ರರ ಪತ್ತೆ ಇನ್ನೂ ಆಗಿಲ್ಲ. ಉಳಿದ ಉಗ್ರರಿಗೆ ಶೋಧ ಕಾರ್ಯ ನಡೆಯುತ್ತಿದೆ’ ಎಂದಿದ್ದಾರೆ.
More Stories
ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ