ಸೆಮಿಫೈನಲ್ ನಲ್ಲಿ ಭಾರತದ ಪುರುಷರ ಹಾಕಿ ತಂಡಕ್ಕೆ ಸೋಲು: ಚಿನ್ನದ ಕನಸು ಭಗ್ನ – ಕಂಚಿಗೆ ಹೋರಾಟ

Team Newsnap
1 Min Read

41 ವರ್ಷಗಳ ಬಳಿಕ ಒಲಂಪಿಕ್ ಹಾಕಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ತಂಡ ಬೆಲ್ಜಿಯಂ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ 5-2 ಗೋಲುಗಳ ಅಂತರದಲ್ಲಿ ಸೋಲು ಕಂಡಿತು. ಈ ಮೂಲಕ ಚಿನ್ನದ ಕನಸು ಭಗ್ನವಾದಂತಾಯಿತು.‌

ಉಭಯ ತಂಡಗಳ ನಡುವೆ ಸಾಕಷ್ಟು ಜಿದ್ದಾಜಿದ್ದಿನ ಕಾದಾಟ ನಡೆಯಿತು. ಕೊನೆಯಲ್ಲಿ, ಸಂಪೂರ್ಣ ಮೇಲುಗೈ ಸಾಧಿಸಿದ ಬೆಲ್ಜಿಯಂ ಮುನ್ನಡೆ ಕಂಡಿತು.

ಕೆಲವು ತಪ್ಪುಗಳಿಂದ ಸಾಲು ಸಾಲು ಪೆನಾಲ್ಟಿ ತೆತ್ತ ಭಾರತಕ್ಕೆ ತನ್ನ ಫೈನಲ್ ಪಯಣದ ಕನಸು ನನಸಾಗಲಿಲ್ಲ.

ಪಂದ್ಯದಲ್ಲಿ ಭಾರತದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಪಂದ್ಯದ ಎರಡನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್​ನಲ್ಲಿ ಬೆಲ್ಜಿಯಂನ ಫೆಲಿಕ್ಸ್ ಡಿನೇಯರ್ ಬೆಲ್ಜಿಯಂ ಪರ ಮೊದಲ ಗೋಲು ಬಾರಿಸಿದರು.

ಭಾರತಕ್ಕೆ ಅದನ್ನು ಸರಿದೂಗಿಸಲು ಸ್ವಲ್ಪ ಸಮಯ ಬೇಕಾಯ್ತು. ಪಂದ್ಯದ ಒಂಬತ್ತನೇ ನಿಮಿಷದಲ್ಲಿ ಹರ್ಮನ್​ಪ್ರೀತ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದು ಕೊಟ್ಟರಲ್ಲದೆ ಟೂರ್ನಿಯಲ್ಲಿ ತಮ್ಮ ಐದನೇ ಗೋಲ್ ಗಳಿಸುವ ಮೂಲಕ ಭಾರತಕ್ಕೆ ಸಮಬಲ ಸಾಧಿಸಲು ನೆರವಾದರು.

ಟೂರ್ನಿಯಲ್ಲಿ ತಮ್ಮ ಐದನೇ ಗೋಲು ಸಿಡಿಸಿದ ಹರ್ಮನ್​ಪ್ರೀತ್, ಭಾರತಕ್ಕೆ ಸಮಬಲ ಸಾಧಿಸಲು ನೆರವಾದರು.

ನಾಲ್ಕನೇ ಅವಧಿಯಲ್ಲಿ ಬೆಲ್ಜಿಯಂನ ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ ಬೆಲ್ಜಿಯಂಗೆ 3-2ರ ಮುನ್ನಡೆ ತಂದಿತ್ತರು. ಪಂದ್ಯಾವಳಿಯ 11ನೇ ಗೋಲು ಬಾರಿಸಿದ ಹೆನ್ರಿಕ್ಸ್ ಪಂದ್ಯದಲ್ಲಿ ಬೆಲ್ಜಿಯಂಗೆ ಮುನ್ನಡೆ ಒದಗಿಸಿದರು.

ಸಾಲು ಸಾಲು ಪೆನಾಲ್ಟಿ ಕಾರ್ನರ್ ಮಾಡಿದ ಭಾರತಕ್ಕೆ ಹಿನ್ನೆಡೆಯಾಯಿತು. ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತೊಂದು ಗೋಲು ಬಾರಿಸಿ 4-2ರ ಮುನ್ನಡೆಗೆ ಕಾರಣರಾದರು. ಕೊನೆಯಲ್ಲಿ ಮತ್ತೊಂದು ಗೋಲು ಬಾರಿಸಿದ ಬೆಲ್ಜಿಯಂ 5-2ರ ಮುನ್ನಡೆ ಕಂಡು ಗೆಲುವಿನ ನಗೆ ಬೀರಿತು.

ಬೆಲ್ಜಿಯಂ ತಂಡವು ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್​ನಲ್ಲಿ ಸೆಣಸಲಿರುವ ಜರ್ಮನಿ ಮತ್ತು ಆಸ್ಟ್ರೇಲಿಯಾದ ನಡುವಿನ ವಿಜೇತರನ್ನು ಫೈನಲ್​ನಲ್ಲಿ ಎದುರಿಸಲಿದೆ. ಸೋತ ತಂಡವು, ಭಾರತದೊಂದಿಗೆ ಕಂಚಿಗಾಗಿ ಸ್ಪರ್ಧಿಸಲಿದೆ.

Share This Article
Leave a comment