January 16, 2025

Newsnap Kannada

The World at your finger tips!

BASAVARAJ BOMMAYI

ಜಿಂದಾಲ್​ ಗೆ 3667 ಎಕರೆ ಭೂಮಿ ಮಾರಾಟ ಮಾಡುವ ನಿರ್ಧಾರಕ್ಕೆ ತಡೆ

Spread the love

ಜಿಂದಾಲ್​ ಕಂಪನಿಗೆ 3667 ಎಕರೆ ಜಮೀನು ಮಾರಾಟ ಮಾಡುವ ನಿರ್ಧಾರ ವನ್ನು ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ

ಸಚಿವ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ, ಸಂಪುಟ ನಿರ್ಧಾರಗಳನ್ನು ವಿವರಿಸಿದರು.

ಜಿಂದಾಲ್​ಗೆ ಭೂಮಿ ಕೊಡುವ ವಿಚಾರದಲ್ಲಿ ಹಿಂದಿನ ಕ್ಯಾಬಿನೆಟ್​ ತೀರ್ಮಾನದ ಬಗ್ಗೆ ಇಂದೂ ತೀರ್ಮಾನ ಆಗಿಲ್ಲ. ಹೀಗಾಗಿ ಹಿಂದಿನ ನಿರ್ಧಾರವನ್ನು ನಾವು ತಡೆಹಿಡಿದ್ದೇವೆ. ಜಿಂದಾಲ್ ಸಂಸ್ಥೆಗೆ ಭೂಮಿ ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಣಯ ಜಾರಿಗೊಳಿಸಲಾಗುವುದಿಲ್ಲ ಎಂದು ಹೇಳಿದರು.

ಜಿಂದಾಲ್ ಸಂಸ್ಥೆಗೆ ಸುಮಾರು 3,667 ಎಕರೆ ಭೂಮಿಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ಸಂಬಂಧ ಸಿಎಂಗೆ ನೋಟಿಸ್ ಕೂಡ ಜಾರಿಯಾಗಿತ್ತು.

Copyright © All rights reserved Newsnap | Newsever by AF themes.
error: Content is protected !!