ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಆರ್‌ಬಿಐ ಹೊಸ ನಿಯಮ ಜಾರಿ

Team Newsnap
1 Min Read
Restrictions on 5 co-operative banks of the country including Maddur's Shimsha: Reserve Bank ಮದ್ದೂರಿನ ಶಿಂಷಾ ಸೇರಿ ದೇಶದ 5 ಸಹಕಾರಿ ಬ್ಯಾಂಕ್‌ಗಳಿಗೆ ನಿರ್ಬಂಧ : ರಿಸರ್ವ ಬ್ಯಾಂಕ್

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಟ್ ಬಳಕೆದಾರರು ಅನೇಕ ವಂಚನೆಗಳ ಪ್ರರಕರಣಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಆರ್‌ಬಿ‌ಐ ಇಂದಿನಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಮಾರ್ಚ್ 1 ರಿಂದಲೇ ಈ ನಿಯಮಗಳನ್ನು ಜಾರಿಗೆ ತರುವ ಉದ್ದೇಶವನ್ನು ಆರ್‌ಬಿಐ ಹೊಂದಿತ್ತು. ಆದರೆ ಕೋವಿಡ್ ಸೋಂಕು ಎಲ್ಲೆಡೆ ಹರಡಿದ್ದ ಹಿನ್ನಲೆಯಲ್ಲಿ‌ ನಿನ್ನೆಯಿಂದ ಈ ನಿಯಮಗಳು ಜಾರಿಗೆ ಬಂದಿವೆ.

ಏನವು ನಿಯಮಗಳು
  1. ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಸಂದರ್ಭದಲ್ಲಿ ದೇಶೀಯ ವಹಿವಾಟಿಗೆ ಸೀಮಿತಗೊಳಿಸುವಂತೆ ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೂ ಸೂಚಿಸಿದೆ. ಅಂತರಾಷ್ಟ್ರೀಯ‌ ವ್ಯವಹಾರದ ಸಂದರ್ಭದಲ್ಲಿ ಬ್ಯಾಂಕುಗಳ ಪೂರ್ವಾನುಮತಿ ಕಡ್ಡಾಯವಾಗಿದೆ.
  2. ಗ್ರಾಹಕರು ಸಂಪರ್ಕವಿಲ್ಲದ ವಹಿವಾಟು, ದೇಶೀಯ ವಹಿವಾಟು ಹಾಗೂ ಅಂತರಾಷ್ಟ್ರೀಯ ವಹಿವಾಟುಗಳನ್ನು ಮಾಡಬೇಕೆಂದಲ್ಲಿ‌ ಅವನು ತನ್ನ ಆಯ್ಕೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
  3. ಗ್ರಾಹಕರು ಈಗಾಗಲೇ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಹೊಂದಿರುವ ಬ್ಯಾಂಕುಗಳಿಂದ ಮತ್ತೆ ಹೊಸ ಕಾರ್ಡ್‌ಗಳನ್ನು ಪಡೆಯಬಹುದು.
  4. ಗ್ರಾಹಕರು ಬಯಸಿದಂತೆ ಕಾರ್ಡ್‌ನ ಮಿತಿಯನ್ನು ನಿರ್ಧರಿಸಬಹುದು.
  5. ಯಾವುದೇ ವ್ಯವಹಾರದ ಸಕ್ರಿಯತೆ ಅಥವಾ ನಿಷ್ಕ್ರಿಯತೆ ನಂತರ ಗ್ರಾಹಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನ್ನು ಆನ್ ಅಥವಾ ಆಫ್ ಮಾಡಬಹುದು.
  6. ಕಾರ್ಡ್‌ನ ಸ್ಥಿತಿಯಲ್ಲಿನ ಬದಲಾವಣೆಗಳಿಗೆ ಗ್ರಾಹಕರು‌ ಎಸ್‌ಎಂಎಸ್ ಮೂಲಕ ಸೂಚನೆ ಪಡೆದುಕೊಳ್ಳಬೇಕು.
Share This Article
Leave a comment