ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಟ್ ಬಳಕೆದಾರರು ಅನೇಕ ವಂಚನೆಗಳ ಪ್ರರಕರಣಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಆರ್‌ಬಿಐ ಇಂದಿನಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
ಮಾರ್ಚ್ 1 ರಿಂದಲೇ ಈ ನಿಯಮಗಳನ್ನು ಜಾರಿಗೆ ತರುವ ಉದ್ದೇಶವನ್ನು ಆರ್‌ಬಿಐ ಹೊಂದಿತ್ತು. ಆದರೆ ಕೋವಿಡ್ ಸೋಂಕು ಎಲ್ಲೆಡೆ ಹರಡಿದ್ದ ಹಿನ್ನಲೆಯಲ್ಲಿ ನಿನ್ನೆಯಿಂದ ಈ ನಿಯಮಗಳು ಜಾರಿಗೆ ಬಂದಿವೆ.
ಏನವು ನಿಯಮಗಳು
- ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಸಂದರ್ಭದಲ್ಲಿ ದೇಶೀಯ ವಹಿವಾಟಿಗೆ ಸೀಮಿತಗೊಳಿಸುವಂತೆ ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೂ ಸೂಚಿಸಿದೆ. ಅಂತರಾಷ್ಟ್ರೀಯ ವ್ಯವಹಾರದ ಸಂದರ್ಭದಲ್ಲಿ ಬ್ಯಾಂಕುಗಳ ಪೂರ್ವಾನುಮತಿ ಕಡ್ಡಾಯವಾಗಿದೆ.
- ಗ್ರಾಹಕರು ಸಂಪರ್ಕವಿಲ್ಲದ ವಹಿವಾಟು, ದೇಶೀಯ ವಹಿವಾಟು ಹಾಗೂ ಅಂತರಾಷ್ಟ್ರೀಯ ವಹಿವಾಟುಗಳನ್ನು ಮಾಡಬೇಕೆಂದಲ್ಲಿ ಅವನು ತನ್ನ ಆಯ್ಕೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
- ಗ್ರಾಹಕರು ಈಗಾಗಲೇ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಹೊಂದಿರುವ ಬ್ಯಾಂಕುಗಳಿಂದ ಮತ್ತೆ ಹೊಸ ಕಾರ್ಡ್‌ಗಳನ್ನು ಪಡೆಯಬಹುದು.
- ಗ್ರಾಹಕರು ಬಯಸಿದಂತೆ ಕಾರ್ಡ್‌ನ ಮಿತಿಯನ್ನು ನಿರ್ಧರಿಸಬಹುದು.
- ಯಾವುದೇ ವ್ಯವಹಾರದ ಸಕ್ರಿಯತೆ ಅಥವಾ ನಿಷ್ಕ್ರಿಯತೆ ನಂತರ ಗ್ರಾಹಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನ್ನು ಆನ್ ಅಥವಾ ಆಫ್ ಮಾಡಬಹುದು.
- ಕಾರ್ಡ್‌ನ ಸ್ಥಿತಿಯಲ್ಲಿನ ಬದಲಾವಣೆಗಳಿಗೆ ಗ್ರಾಹಕರು ಎಸ್‌ಎಂಎಸ್ ಮೂಲಕ ಸೂಚನೆ ಪಡೆದುಕೊಳ್ಳಬೇಕು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ