February 20, 2026

Newsnap Kannada

The World at your finger tips!

karona

ನಾಗಮಂಗಲದಲ್ಲೂ ಆಕ್ಸಿಜನ್ ಸಿಗದೆ ನರಳಾಡಿ ಸೋಂಕಿತ ಸಾವು

Spread the love

ಚಾಮರಾಜನಗರದಲ್ಲಿ ಸೋಮವಾರ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟ ಬೆನ್ನಲ್ಲೇ ಇದೀಗ ಮಂಡ್ಯದ ನಾಗಮಂಗಲದಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.

ಮಂಡ್ಯದ ಹಾಲಹಳ್ಳಿಯ ನಿವಾಸಿ ಧನಂಜಯ್(45) ನಾಗಮಂಗಲ ತಾಲ್ಲೂಕು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಧನಂಜಯ್ ಅವರಿಗೆ ಇತ್ತೀಚೆಗಷ್ಟೇ ಕೊವಿಡ್ 19 ಧೃಡಪಟ್ಟಿತ್ತು. ಹೀಗಾಗಿ ವೈದ್ಯರ ಸೂಚನೆಯಂತೆ ಹೋಮ್ ಕ್ವಾರಂಟೈನ್‍ನಲ್ಲಿದ್ದರು. ಆಗ ಉಸಿರಾಟದ ಸಮಸ್ಯೆ ಉಲ್ಬಣಗೊಂಡಿತು.

ಮಿಮ್ಸ್ ನಲ್ಲಿ ಬೆಡ್ ಸಿಗದ ಕಾರಣ ಧನಂಜಯ್ ಕೀಲಾರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮತ್ತೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ನಾಗಮಂಗಲ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸರಿಯಾದ ಸಮಯಕ್ಕೆ ಧನಂಜಯ್ ಅವರಿಗೆ ಆಕ್ಸಿಜನ್ ಹಾಗೂ ಬೆಡ್ ಸಿಗದೆ ನರಳಿ ಸಾವನ್ನಪ್ಪಿದ್ದಾರೆ.

error: Content is protected !!