ಮನೆಯಿಂದ ಮುನಿಸಿಕೊಂಡು ಹೋಗಿದ್ದ ಅಕ್ಕ-ತಂಗಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಅಶ್ವಿನಿ (16)ಹಾಗೂ ನಿಶ್ಚಿತಾ(14 ) ಎಂಬ ಇಬ್ಬರು ಬಾಲಕಿಯರು, ನಗರದ ಕಂದವಾರ ಕೆರೆಯಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.
ಅಗಲಗುರ್ಕಿಯ ಮುನಿಸ್ವಾಮಿ ಹಾಗೂ ಮುನಿಲಕ್ಷಿ ದಂಪತಿಯ ಪುತ್ರಿಯರಾದ ಅಶ್ವಿನಿ, ನಿಶ್ಚಿತಾ, ಮುನಿಸಿಕೊಂಡು ಮನೆಯಿಂದ ಹೊರಟಿದ್ದರು.
ಈ ಇಬ್ಬರು ಇದೀಗ ಶವವಾಗಿ ಕಂದವಾರ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಕೇಂದ್ರ ಮಂತ್ರಿ ಅಮಿತ್ ಶಾ ಭೇಟಿ ಸಾಧ್ಯವಾಗಲಿಲ್ಲ : ಸಂಪುಟ ರಚನೆ ಬಗ್ಗೆ ಮಾತುಕತೆ ಇಲ್ಲ : ಸಿಎಂ
- ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
- ಕಾಂಗ್ರೆಸ್ನಲ್ಲೂ ಪರಷತ್ ಟಿಕಟ್ ಗೆ ಜೋರಾಯ್ತು ಗಲಾಟೆ – ಡಿಕೆಶಿ , ಸಿದ್ದು ದೆಹಲಿಗೆ
- ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
- ಅಂತಾರಾಷ್ಟ್ರೀಯ ಯೋಗ ದಿನದಂದು ಮೋದಿ ಮೈಸೂರಿಗೆ
More Stories
ಸಮುದ್ರದಲ್ಲಿ ಚೇಜ್ ಮಾಡಿ1,526 ಕೋಟಿ ಮೌಲ್ಯದ 218 ಕೆಜಿ ಹೆರಾಯಿನ್ ವಶ
ಧಾರವಾಡ ಬಳಿ ಭೀಕರ ರಸ್ತೆ ಅಪಘಾತ : ಮರಕ್ಕೆ ಕ್ರೂಸರ್ ಡಿಕ್ಕಿ 8 ಮಂದಿ ಸ್ಥಳದಲ್ಲೇ ಸಾವು
ಕಾರು ಸರಣಿ ಅಪಘಾತ – ಓರ್ವ ಸಾವು : ಕಿರುತೆರೆ ಸಹ ನಿರ್ದೇಶಕ ಬಂಧನ