December 26, 2024

Newsnap Kannada

The World at your finger tips!

akka thangi

ಮುನಿಸಿಕೊಂಡು ಹೋಗಿದ್ದ ಅಕ್ಕ-ತಂಗಿ ಕೆರೆಗೆ ಸಾವು : ಚಿಕ್ಕಬಳ್ಳಾಪುರದಲ್ಲಿ ದುರಂತ

Spread the love

ಮನೆಯಿಂದ ಮುನಿಸಿಕೊಂಡು ಹೋಗಿದ್ದ ಅಕ್ಕ-ತಂಗಿ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ ಅಶ್ವಿನಿ (16)ಹಾಗೂ ನಿಶ್ಚಿತಾ(14 ) ಎಂಬ ಇಬ್ಬರು ಬಾಲಕಿಯರು, ನಗರದ ಕಂದವಾರ ಕೆರೆಯಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.

ಅಗಲಗುರ್ಕಿಯ ಮುನಿಸ್ವಾಮಿ ಹಾಗೂ ಮುನಿಲಕ್ಷಿ ದಂಪತಿಯ ಪುತ್ರಿಯರಾದ ಅಶ್ವಿನಿ, ನಿಶ್ಚಿತಾ, ಮುನಿಸಿಕೊಂಡು ಮನೆಯಿಂದ ಹೊರಟಿದ್ದರು.

ಈ ಇಬ್ಬರು ಇದೀಗ ಶವವಾಗಿ ಕಂದವಾರ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!