May 29, 2022

Newsnap Kannada

The World at your finger tips!

JUNIOR RAVICHANDRAN

ವಿದ್ಯುತ್ ಸ್ಪರ್ಶದಿಂದಾಗಿ ‘ಜೂನಿಯರ್ ರವಿಚಂದ್ರನ್​’ ಸಾವು

Spread the love

ಜೂನಿಯರ್ ರವಿಚಂದ್ರನ್’​ ಎಂದೇ ಖ್ಯಾತರಾಗಿದ್ದ ಆರ್ಕೆಸ್ಟ್ರಾ ಕಲಾವಿದ ಲಕ್ಷ್ಮೀನಾರಾಯಣ್​ ಎಂಬವರು ವಿದ್ಯುತ್ ಶಾಕ್​ನಿಂದಾಗಿ ಸಾವಿಗೀಡಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೆರೂರು ಗ್ರಾಮದ ನಿವಾಸಿ ಲಕ್ಷ್ಮೀನಾರಾಯಣ್​ (35) ಸಾವಿಗೀಡಾದವರು.

ಸಂಪ್​ಗೆ ನೀರು ತುಂಬಿಸಲು ಮೋಟರ್ ಆನ್​ ಮಾಡುವ ಸಂದರ್ಭದಲ್ಲಿ ವಿದ್ಯುತ್​ ಪ್ರವಹಿಸಿ ಮೃತಪಟ್ಟಿದ್ದಾರೆ.ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸಂಗೀತ ಸಂಜೆ ಕಾರ್ಯಕ್ರಮದ ಕಲಾವಿದನಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮೀನಾರಾಯಣ್, ರವಿಚಂದ್ರನ್ ಅವರನ್ನು ಹೋಲುತ್ತಿದ್ದುದರಿಂದ ಮತ್ತು ಅವರಂತೆಯೇ ವೇಷಭೂಷಣ ಹೊಂದಿದ್ದರಿಂದ ಅವರು ‘ಜೂನಿಯರ್ ರವಿಚಂದ್ರನ್’ ಎಂದೇ ಕರೆಯಲ್ಪಡುತ್ತಿದ್ದರು.

error: Content is protected !!