December 21, 2024

Newsnap Kannada

The World at your finger tips!

dcc bank

ಡಿಸಿಸಿ ಬ್ಯಾಂಕ್ – ಬಿಜೆಪಿ, ಜೆಡಿಎಸ್ ಮೈತ್ರಿ – ಕಾಂಗ್ರೆಸ್ ಆಕಾಂಕ್ಷಿತರಿಂದ ನಾಮಪತ್ರ ಸಲ್ಲಿಕೆ

Spread the love

ಅತ್ಯಂತ ಕುತೂಹಲ ಕೆರಳಿಸಿರುವ ಮಂಡ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ – ಉಪಾಧ್ಯಕ್ಷ ರ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕಾರ್ಯ 8 ಗಂಟೆಗೆ ಆರಂಭವಾಗಿ 10 ಗಂಟೆಗೆ ನಾಮಪತ್ರ ಸಲ್ಲಿಕೆ ಅಂತ್ಯ ಗೊಂಡಿತು.

ಬಿಜೆಪಿ ಯ ನಾಮ ನಿರ್ದೇಶಕ ಸಿ ಪಿ ಉಮೇಶ್ ಅಧ್ಯಕ್ಷ ಸ್ಥಾನಕ್ಕೆ ಎಚ್ ಕೆ ಅಶೋಕ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಿಂದ ಕೆ .ಸಿ. ಜೋಗಿಗೌಡ ಅಧ್ಯಕ್ಷ ಸ್ಥಾನಕ್ಕೆ ಪಿ . ಎಸ್. ಚಂದ್ರಶೇಖರ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಆಗಮಿಸಿದ ನಾಯಕರು ಮಾಜಿ ಸಚಿವ ಸಿ . ಎಸ್. ಪುಟ್ಟರಾಜು ನೇತೃತ್ವದಲ್ಲಿ ನಾಮ‌ಪತ್ರ ಸಲ್ಲಿಕೆ ಮಾಡಿದರು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸಿಪಿ ಉಮೇಶ್
ಉಪಾಧ್ಯಕ್ಷ ಸ್ಥಾನಕ್ಕೆ ಅಶೋಕ್ 8.45 ಕ್ಕೆ ನಾಮ ಪತ್ರಸಲ್ಲಿಕೆ ಮಾಡಿದರು.

ರಾಜಕೀಯ ಇಲ್ಲ – ಪುಟ್ಟರಾಜು:

download 3 1

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಾಜಕೀಯ ಇಲ್ಲ. ಕಾಂಗ್ರೆಸ್ ನ ನಾಯಕರೇ ನಮ್ಮ ಜೊತೆ ಇದ್ದಾರೆ ಎಂದು ಮಾಜಿ ಸಚಿವ ಪುಟ್ಟರಾಜು ನ್ಯೂಸ್ ಸ್ನ್ಯಾಪ್ ಗೆ ತಿಳಿಸಿದರು.

ನಾವು ಅಧಿಕಾರ ಹಿಡಿಯಲು ಬೇಕಾದ ಸಂಖ್ಯೆ ನಮ್ಮಬಳಿ ಇದೆ ಸರ್ಕಾರದ ನಾಮನಿರ್ದೇಶಕ ಉಮೇಶ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆರೈತರಿಗೆ ಅನುಕೂಲ ಮಾಡಿಕೊಡಲು ನಾವು ಪಕ್ಷಾತೀತವಾಗಿ ಮೈತ್ರಿಯಾಗಿದ್ದೇವೆ ಎಂದರು.

ಅವರುಗಳ ಬಗ್ಗೆ ಮಾತನಾಡುವುದಿಲ್ಲ:

ಸಹಕಾರಿ ಕ್ಷೇತ್ರ ಅನ್ನೋದು ಪಕ್ಷಗಳಿಗೆ ಸೀಮಿತವಾದುದಲ್ಲ.ಸುಮಲತಾ, ಸಚಿವ ನಾರಾಯಣಗೌಡ ಮೈತ್ರಿ ಬೇಡ ಎಂದ ವಿಚಾರ ನಮಗೆ ಗೊತ್ತಿಲ್ಲ, ನಾನು ಅದರ ಬಗ್ಗೆ ಮಾತನಾಡಲ್ಲ ಎಂದರು.

ಈಗೇಕೆ ಮೈತ್ರಿ ಮಾತು?

ಜೆಡಿಎಸ್-ಬಿಜೆಪಿ ಮೈತ್ರಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮಾತ್ರ ವಿಧಾನಸಬೆ ಚುನಾವಣೆ ಇನ್ನು ಎರಡೂವರೆ ವರ್ಷ ಇದೆ ಹಾಗಾಗಿ ಅಲ್ಲಿಯವರೆಗೂ ಈ ಬಗ್ಗೆ ಮಾತನಾಡೋದು ಬೇಡ ಎಂದು ಹೇಳಿದರು. .

ಕಾಂಗ್ರೆಸ್ ಆಕಾಂಕ್ಷಿಗಳಿಂದಲೂ ನಾಮಪತ್ರ

ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಬೆನ್ನಲ್ಲೆ‌ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರೂ ಕೂಡ ನಾಮಪತ್ರ ಸಲ್ಲಿಸಿದರು.

ಮಾಜಿ ಸಚಿವ, ಡಿಸಿಸಿ ಬ್ಯಾಂಕ್ ನಿರ್ದೇಶಕ ನರೇಂದ್ರಸ್ವಾಮಿ ನೇತೃತ್ವದಲ್ಲಿ
ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಜೋಗೀಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ್ ನಾಮಪತ್ರ ಸಲ್ಲಿಕೆ ಮಾಡಿದರು.

ಏಳು ಜನ ನಿರ್ದೇಶಕರು ಸೇರಿದಂತೆ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ನಾವೇ ಗೆಲ್ಲತ್ತೇವೆ ನರೇಂದ್ರ ಸ್ವಾಮಿ:

narendra swamy

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ‌ ಸಚಿವ ನರೇಂದ್ರಸ್ವಾಮಿ ಮಾತನಾಡಿ ಮಂಡ್ಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂದು ಹೆಚ್ಚು ಆತ್ಮವಿಶ್ವಾಸ ದಿಂದ ಹೇಳಿದರು.

ಜೆಡಿಎಸ್ ತಂತ್ರಗಾರಿಕೆ‌ ಮಾಡಿರೋದು ಎಲ್ಲರಿಗೂ ಗೊತ್ತು.ನಮ್ಮ ಬಳಿ ಈಗಲೂ‌ ಬಹುಮತ ಇದೆ. ನಾವು ಚುನಾವಣೆ ಯನ್ನು ಗೆಲ್ಲುತ್ತೇವೆ ಎಂದರು.

Copyright © All rights reserved Newsnap | Newsever by AF themes.
error: Content is protected !!